ಮಡಿಕೇರಿ, ಮಾ. 1: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪೆÇಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭಧ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಭಾನುವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಮಿಕ ಸಮ್ಮಾನ್ ದಿನಾಚರಣೆ ಯನ್ನು ಉಪವಿಭಾಗಾಧಿಕಾರಿ ಟಿ. ಜವರೇಗೌಡ ಉದ್ಘಾಟಿಸಿದರು.ಕಾರ್ಮಿಕರು ಗಳಿಸಿದ್ದರಲ್ಲಿ ಸ್ವಲ್ಪ ಉಳಿಸಿ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ. ಮುಖ್ಯವಾಹಿನಿಗೆ ಬರಬೇಕೆಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲೂಕು ಕಾರ್ಮಿಕಾಧಿಕಾರಿ ಯತ್ನಟ್ಟಿ ಅವರು, 2018ರಲ್ಲಿ ಸರ್ಕಾರವು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಂಡಳಿ ವತಿಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಜಿಲ್ಲೆಯಲ್ಲಿ ಇದುವರೆಗೂ ಈ ವಲಯಗಳಲ್ಲಿ ಕೆಲಸ ಮಾಡುವ ಈ ವರ್ಗದ ಕಾರ್ಮಿಕರಿಂದ 1764 ಅರ್ಜಿಗಳು ಸಲ್ಲಿಕೆಯಾಗಿದ್ದು, 1067 ಸ್ಮಾರ್ಟ್ ಕಾರ್ಡ್‍ಗಳು ಮಂಡಳಿಯಿಂದ ವಿತರಣೆಯಾಗಿದ್ದು, ಉಳಿದ ಸ್ಮಾರ್ಟ್ ಕಾರ್ಡ್‍ಗಳನ್ನು ಸಹ ನೀಡಲಾಗುತ್ತದೆ ಎಂದು ತಿಳಿಸಿದರು.

ಆಟೋಚಾಲಕರ ಸಂಘದ ಅಧ್ಯಕ್ಷ ಮೇದಪ್ಪ ಮಾತನಾಡಿ, ಸಮಾಜದಲ್ಲಿ ಅಸಂಘಟಿತ ಕಾರ್ಮಿಕರು ಸಾಕಷÀ್ಟು ಸಂಖ್ಯೆಯಲ್ಲಿದ್ದಾರೆ. ಸರ್ಕಾರ ಇತ್ತೀಚಿನ ದಿನಗಳಲ್ಲಿ ಈ ವರ್ಗದ ಕಾರ್ಮಿಕರ ಸೇವೆಯನ್ನು ಪರಿಗಣಿಸಿ ಸನ್ಮಾನ ಮಾಡುತ್ತಿರುವುದು ಸಂತಸದ ವಿಷÀಯ ಎಂದರು.

ಬಳಿಕ ಮಾತನಾಡಿದ ಟೈಲರ್ಸ್ ಅಸೋಸಿಯೇಷÀನ್ ಅಧ್ಯಕ್ಷರಾದ ಆನಂದ್ ಅವರು, ಅಸಂಘಟಿತ ವಲಯದ ಕಾರ್ಮಿಕರು ಸಮಾಜದಲ್ಲಿ ಸಾಕಷÀ್ಟು ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಸೇವೆಯನ್ನೂ ಪರಿಗಣಿಸಿ ಸನ್ಮಾನ ಮಾಡುತ್ತಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಮಿಕ ಸಮ್ಮಾನ ದಿನಾಚರಣೆಯ ಪ್ರಯುಕ್ತ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಆಯ್ಕೆಯಾದ 11 ವಲಯದ ಅಸಂಘಟಿತ ಕಾರ್ಮಿಕರು ಹಾಗೂ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಆಯ್ಕೆಯಾದ 1 ವಲಯದ, ಕಾರ್ಮಿಕರಿಕೆ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷÀ ಪುರಸ್ಕಾರ ನೀಡಿ ಗೌರವಿಸಲಾಯಿತು.

ಹಮಾಲ ವೃತ್ತಿ ವಿಭಾಗದಲ್ಲಿ, ಶ್ರಮ ಸಮ್ಮಾನ ಪ್ರಶಸ್ತಿಗೆ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟದ ಪಾಂಡುರಂಗ ಎಚ್.ಕೆ., ಹಗ್ಗಡಹಳ್ಳಿಯ ಪರಮೇಶ್, ಮಡಿಕೇರಿಯ ಓ.ಆರ್ ಗೋಪಾಲಕೃಷÀ್ಣ.

(ಮೊದಲ ಪುಟದಿಂದ)

ವಿಶೇಷÀ ಪುರಸ್ಕಾರ ಪ್ರಶಸ್ತಿಗೆ ವೀರಾಜಪೇಟೆಯ ಎಂ. ಕುಮಾರ, ಹರೀಶ ಎಂ.ಎಚ್, ಮಡಿಕೇರಿಯ ಮಂಜುನಾಥ, ಕೆ.ಸಿ. ನಿತಿನ್ ಕುಮಾರ್, ಕೆ.ಸಿ ಜಗನ್ನಾಥ್, ಸೋಮವಾರಾಪೇಟೆಯ ನಾಗರಾಜು ಎಚ್.ಎ, ಜಾನ್ ವೆಸ್ಲಿ, ನಂದೀಶ ಟಿ.

ಟೈಲರ್ ವೃತ್ತಿ ವಿಭಾಗದಲ್ಲಿ, ಶ್ರಮ ಸಮ್ಮಾನ ಪ್ರಶಸ್ತಿಗೆ ಸೋಮವಾರ ಪೇಟೆಯ ಪ್ರಮೀಳ ಪಿ.ಬಿ, ಗಿರೀಶ್ ಕೆ.ಬಿ ವೀರಾಜಪೇಟೆಯ ಮಹೇಂದ್ರ ಕುಮಾರ್.

ವಿಶೇಷÀ ಪುರಸ್ಕಾರ ಪ್ರಶಸ್ತಿಗೆ ಸೋಮವಾರಪೇಟೆಯ ಅನಿತ ಬಿ.ಬಿ, ಅಸ್ಮ ಬಾನು, ಎಸ್.ಸಿ ನಂದೀಶ, ದಾಕ್ಷಾಯಿಣಿ, ಬಿ.ಕೆ ಕಾಂತಿ, ಆಸೀಫ್, ಬಿ.ಟಿ ಕುಮಾರ, ವೀರಾಜಪೇಟೆಯ ಶಿನಿ ಯು.ಎಸ್.

ಗೃಹ ಕಾರ್ಮಿಕರ ವೃತ್ತಿ ವಿಭಾಗದಲ್ಲಿ, ಶ್ರಮ ಸಮ್ಮಾನ ಪ್ರಶಸ್ತಿಗೆ ವೀರಾಜಪೇಟೆಯ ಬಿಂದು ಸಿ.ಆರ್, ಸೋಮವಾರಪೇಟೆಯ ಯಾಸ್ಮಿನ್, ಮಡಿಕೇರಿಯ ಎಸ್. ರೂತ್.

ವಿಶೇಷ ಪುರಸ್ಕಾರ ಪ್ರಶಸ್ತಿಗೆ ಸೋಮವಾರಪೇಟೆಯ ಎಸ್.ಕೆ. ನಗೀನಬಾನು, ಶೈಲಜಾ, ಲಲಿತಾ, ಮಂಜುಳ, ಮಡಿಕೇರಿಯ ಮೀನಾಕ್ಷಿ ಮತ್ತು ಶಶಿಕಲಾ.

ಮೆಕ್ಯಾನಿಕ್ ಕಾರ್ಮಿಕರ ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ ಪ್ರಶಸ್ತಿಗೆ ಮಡಿಕೇರಿಯ ಕೆ.ಆರ್. ಸುರೇಶ್, ಪಿ.ಎಸ್. ಹರ್ಷತ್, ಸೋಮವಾರ ಪೇಟೆಯ ವೆನಿಲ್ ಹಟ್ಸನ್.

ವಿಶೇಷ ಪುರಸ್ಕಾರ ಪ್ರಶಸ್ತಿಗೆ ಸೋಮವಾರಪೇಟೆಯ ಮಹಮ್ಮದ್ ಅಸ್ಗರ್, ಎನ್.ಎಲ್. ವಿಜಯ, ವಸಂತ ಎಚ್.ಜೆ, ಎಂ.ಕೆ. ರವಿ, ಮಡಿಕೇರಿಯ ಮನೋಹರ್ ಡೇವಿಡ್, ರಮೇಶ್ ವೈ.ಟಿ, ಎಂ.ಎಂ. ಜಕ್ರಿಯಾ, ಬಿ.ಆರ್. ಮಂಜುನಾಥ್.

ಅಗಸರು ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ ಪ್ರಶಸ್ತಿಗೆ ವೀರಾಜಪೇಟೆಯ ದೇವರಾಜು, ವಿನೀತ್ ಕುಮಾರ್, ಎಂ.ಎಂ. ಅವಿನಾಶ್.

ವಿಶೇಷ ಪುರಸ್ಕಾರ ಪ್ರಶಸ್ತಿಗೆ ಶನಿವಾರಸಂತೆಯ ಮಹೇಶ ಎಸ್.ಡಿ, ಸೋಮವಾರಪೇಟೆಯ ಎಂ. ಮಹದೇವಮ್ಮ.

ಅಕ್ಕಸಾಲಿಗರು ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ್ ಪ್ರಶಸ್ತಿಗೆ ಸೋಮವಾರಪೇಟೆಯ ರಾಜೀವ್ ಎನ್.ಎಸ್, ಎಸ್.ಎ. ಲೋಹಿತಾಶ್ವ, ಮಡಿಕೇರಿಯ ಆರ್.ಬಿ. ರವಿ.

ವಿಶೇಷ ಪುರಸ್ಕಾರ ಪ್ರಶಸ್ತಿಗೆ ಸೋಮವಾರಪೇಟೆಯ ಎಂ.ಪಿ. ರಾಜೇಶ್, ವಿ.ಎಸ್. ರಾಜೇಶ್, ಮಡಿಕೇರಿಯ ಬಿ.ಕೆ. ಕೃಷ್ಣಶೇಟ್, ಪ್ರವೀಣ್ ಕುಮಾರ್, ಬಿ.ಸಿ. ಆಶೋಕ್ ಆಚಾರ್ಯ, ಎಂ.ಎಂ. ಚರಣ್ ಕುಮಾರ್, ಕೆ. ರವಿ, ಬಿ.ಎಚ್. ಉಲ್ಲಾಸ್.

ಕಮ್ಮಾರರು ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ ಪ್ರಶಸ್ತಿಗೆ ಸೋಮವಾರಪೇಟೆಯ ಪುಟ್ಟಣ್ಣ ಕೆ.ವಿ.

ಸವಿತಾ ಸಮಾಜ ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ್ ಪ್ರಶಸ್ತಿಗೆ ಮಡಿಕೇರಿಯ ಟಿ.ಜೆ. ಸಂದೀಪ್, ಎಂ.ಟಿ. ಮಧು ಸೋಮವಾರಪೇಟೆಯ ಎನ್.ಎಲ್. ಉದಯ ಕುಮಾರ್.

ವಿಶೇಷ ಪುರಸ್ಕಾರ ಪ್ರಶಸ್ತಿಗೆ ವೀರಾಜಪೇಟೆಯ ಬಿ.ಸಿ. ಈಶ್ವರ, ಪಿ.ಎಸ್. ದಿನೇಶ್, ವೆಂಕಟೇಶ್ ಕೆ.ಟಿ., ಅನಿಲ್ ಕುಮಾರ್ ಟಿ.ಜಿ. ಸೋಮವಾರಪೇಟೆಯ ಕುಮಾರ, ಎಚ್.ಆರ್. ರಾಮಕೃಷ್ಣ, ಮಡಿಕೇರಿಯ ಕೆ.ಎ. ವಿಜಯ ಭಂಢಾರಿ, ಟಿಪ್ಪು ಕುಮಾರ್ ಕೆ.ಆರ್.

ಚಾಲಕರು/ಸಾರಿಗೆ ಕಾರ್ಮಿಕರು ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ ಪ್ರಶಸ್ತಿಗೆ ಮಡಿಕೇರಿಯ ಕೆ. ಭರತ್‍ಕುಮಾರ್, ಸೋಮವಾರ ಪೇಟೆಯ ಮಹೇಂದ್ರ ಆರ್., ಪಿ.ಎನ್. ಸೋಮಯ್ಯ.

ವಿಶೇಷ ಪುರಸ್ಕಾರ ಪ್ರಶಸ್ತಿಗೆ ಸೋಮವಾರಪೇಟೆಯ ಮಹಮ್ಮದ್ ಇಸ್ಮಾಯಿಲ್, ಶರೀಫ್, ವೀರಾಜಪೇಟೆಯ ಎಂ.ಯು. ರಫೀಕ್, ಜೋಯ್ ಜೋಸೆಫ್, ಮಡಿಕೇರಿಯ ಸಿ.ಎಂ. ಗಣಪತಿ.

ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಆಯ್ಕೆಯಾದ 1 ವಲಯದ ವಲಯವಾದ ಅಸಂಘಟಿತ ಕಾರ್ಮಿಕರಾದ ಚಾಲಕರು/ಸಾರಿಗೆ ಕಾರ್ಮಿಕರು (ತ್ರಿಚಕ್ರ ವಾಹನ ಚಾಲಕರು) ವಿಭಾಗದಲ್ಲಿ ಶ್ರಮ ಸಮ್ಮಾನ ಪ್ರಶಸ್ತಿಗೆ ಮಡಿಕೇರಿಯ ಸುಲೈಮಾನ್ ಎಂ.ವೈ, ಪ್ರಸನ್ನ ಟಿ.ಎಂ, ಬಿ.ಸಿ. ದಿನೇಶ್.

ವಿಶೇಷ ಪುರಸ್ಕಾರ ಪ್ರಶಸ್ತಿಗೆ .ಮಡಿಕೇರಿಯ ಎಂ.ಎ. ಮಹಮ್ಮದ್ ಫಾಯಜ್, ಜೋಸೆಫ್ ಡಿ, ಸಂಜೀವ ಕೆ.ಸಿ, ಎಂ.ಇ. ಅಬ್ದುಲ್ ಅಜೀಜ್, ಮೊಹಮ್ಮದ್ ಶರೀಫ್ ಎಚ್, ಹನೀಫ್ ಎಂ.ಇ, ಎಚ್.ಎಸ್. ನಾಗರಾಜ್, ಸೋಮವಾರಪೇಟೆಯ ಕೆ.ಎಂ. ಶಶಿಮಾರ್ ಇವರುಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಕಾರ್ಮಿಕ ಅಧಿಕಾರಿಗಳಾದ ಎಂ. ಮಹದೇವ ಸ್ವಾಮಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮಡಿಕೇರಿ ತಾಲೂಕು ಕಾರ್ಮಿಕ ಅಧಿಕಾರಿಗಳಾದ ಯತ್ನಟ್ಟಿ ಅವರು ವಂದಿಸಿದರು. ಕೊಡಗು ಜಿಲ್ಲಾ ವಿದ್ಯಾ ಸಾಗರ ಕಲಾವೇದಿಕೆಯ ಈ. ರಾಜು ಮತ್ತು ತಂಡದವರು ನಾಡಗೀತೆ ಹಾಡಿದರು.