ನಾಪೋಕ್ಲು, ಮಾ. 1: ಚೆರಿಯಪರಂಬುವಿನ ಕಲ್ಲುಮೊಟ್ಟೆ ಯುವಕ ಸಂಘದ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚೆರಿಯಪರಂಬುವಿನ ಸಿರಾಜ್ ಫ್ರೆಂಡ್ಸ್ ತಂಡ ಪ್ರಶಸ್ತಿ ಗಳಿಸಿತು. ಯಂಗ್ ಸ್ಟಾರ್ ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕಲ್ಲುಮೊಟ್ಟೆಯಲ್ಲಿ ನಡೆದ ನಾಲ್ಕನೇ ವರ್ಷದ ಕೆ.ಪಿಎಲ್ ವಾಲಿಬಾಲ್ ಲೀಗ್ ಪಂದ್ಯಾಟಕ್ಕೆ ಕಲ್ಲುಮೊಟ್ಟೆ ಮಾಜಿ ಜಮಾಯತ್ ಅಧ್ಯಕ್ಷ ಪುಲಿಯಂಡ ಮೊಯಿದು ಚಾಲನೆ ನೀಡಿದರು. ಪಂದ್ಯಾವಳಿಯ ವಿಜೇತ ತಂಡಗಳಿಗೆ ನಾಪೋಕ್ಲುವಿನ ಆರ್‍ಟಿಐ ಕಾರ್ಯಕರ್ತ ಕೆ.ಎ. ಹ್ಯಾರಿಸ್ ಹಾಗೂ ಸ್ಮೈಲಿಂಗ್ ಫಿಶ್ ಮಾಲಿಕ ಆಲಿ ಬಹುಮಾನ ವಿತರಿಸಿದರು.