ವೀರಾಜಪೇಟೆ, ಮಾ. 1: ಮೈಸೂರಿನಲ್ಲಿ ಅಂತರರಾಷ್ಟ್ರೀಯ ಮಬುನಿ ಹ ಶಿಟೋರಿಯೋ ಕರಾಟೆ ಅಸೋಸಿಯೇಷನ್ ಆಯೋಜಿಸಿದ್ದ 27ನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವೀರಾಪೇಟೆಯ ಕಾವೇರಿ ಶಾಲೆಯ 8ನೇ ತರಗತಿಯ ಅಯ್ಯಪ್ಪ ಪಿ.ಎ 41-45 ಕೆ.ಜಿ. ತೂಕದ ಬಾಲಕರ ವಿಭಾಗದಲ್ಲಿ ಕುಮಿತೆಯ ಪ್ರಥಮ ಸ್ಥಾನ, ಪೊನ್ನಣ್ಣ ಕೆ.ಸಿ. 45 ಕೆ.ಜಿ. ತೂಕದ ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ 2ನೇ ತರಗತಿಯ ಸೋಮಣ್ಣ ಎ.ಎಂ. 21-25 ಕೆ.ಜಿ. ತೂಕದ ವಿಭಾಗದಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ.