ಮಡಿಕೇರಿ, ಮಾ. 1: ಡಿಎಸ್‍ಟಿ-ಎಸ್‍ಇಆರ್‍ಬಿ ಪ್ರಾಯೋಜಿತ ಪ್ರಮುಖ ಸಂಶೋಧನಾ ಯೋಜನೆಯಡಿ ‘ಸಾವಯವ ಧೂಳಿನಿಂದ ಹೊರಹೊಮ್ಮಿದ ಶ್ವಾಸಕೋಶದ ಉರಿಯೂತದಲ್ಲಿ ಸ್ರವಿಸುವ ಫಾಸ್ಫೋಲಿಪೇಸ್ ಎ2 ಪಾತ್ರದ ಮೌಲ್ಯಮಾಪನ’ ಎಂಬ ಶೀರ್ಷಿರ್ಕೆಯಡಿ ಮಂಗಳೂರು ವಿಶ್ವವಿದ್ಯಾಲಯ, ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಬಯೋಕೆಮಿಸ್ಟ್ರಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಫೆಲೋಶಿಪ್ ವಿವರಗಳು ಹೀಗಿವೆ : ಪ್ರಾಜೆಕ್ಟ್ ಅಸಿಸ್ಟೆಂಟ್ : ಸ್ಥಾನದ ಸಂಖ್ಯೆ: 1, ಅರ್ಹತೆ: ಎಂ.ಎಸ್‍ಸಿಯಲ್ಲಿ ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ / ಮತ್ತು ಅಥವಾ ಮೈತ್ರಿ ವಿಷಯಗಳು, ಅಂಚೆ ಮೂಲಕ ಅರ್ಜಿ ಸಲ್ಲಿಸಲು ತಾ. 20, ಕೊನೆ ದಿನವಾಗಿದೆ.

ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿಯನ್ನು ಡಾ. ಕೆ. ಧರ್ಮಪ್ಪ, ಪ್ರಧಾನ ತನಿಖಾಧಿಕಾರಿ ಡಿಎಸ್‍ಟಿ-ಎಸ್‍ಇಆರ್‍ಬಿ ಪ್ರಮುಖ ಸಂಶೋಧನಾ ಯೋಜನೆ, ಬಯೋಕೆಮಿಸ್ಟ್ರಿಯಲ್ಲಿ ಅಧ್ಯಯನ ಮತ್ತು ಸಂಶೋಧನಾ ಇಲಾಖೆ, ಜ್ಞಾನ ಕಾವೇರಿ, ಸ್ನಾತಕೋತ್ತರ ಕೇಂದ್ರ, ಚಿಕ್ಕಅಳುವಾರ, ಕೊಡಗು -571232. ಹೆಚ್ಚಿನ ಮಾಹಿತಿಗೆ ದೂ.ಸಂ: 9008162862, 7019186026 ಸಂಪರ್ಕಿಸಬಹುದು ಎಂದು ಡಾ. ಕೆ. ಧರ್ಮಪ್ಪ ತಿಳಿಸಿದ್ದಾರೆ.

ಪುಸ್ತಕ ಬಹುಮಾನ ಯೋಜನೆಗೆ

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಲೇಖಕರು ಅಥವಾ ಪ್ರಕಾಶಕರು ಅರ್ಜಿ ಸಲ್ಲಿಸಬಹುದಾಗಿದೆ. 2019ರ ಜನವರಿ 1 ರಿಂದ 2019ರ ಡಿಸೆಂಬರ್, 31 ರ ಅವಧಿಯ ಮಧ್ಯೆ ಪ್ರಕಟಗೊಂಡ ಪುಸ್ತಕಗಳನ್ನು 2019 ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪರಿಗಣಿಸಲಾಗುವುದು.

ಅರೆಭಾಷೆ ಕವನ ಸಂಕಲನ, ಅರೆಭಾಷೆ ಕಥಾ ಸಂಕಲನ, ಅರೆಭಾಷೆ ಕಾದಂಬರಿ, ಅರೆಭಾಷೆ ನಾಟಕ, ಅರೆಭಾಷೆ ಮತ್ತು ಸಂಸ್ಕøತಿಯ ಬಗ್ಗೆ ಅಧ್ಯಯನ ಗ್ರಂಥ ಹಾಗೂ ಅರೆಭಾಷೆಯಿಂದ ಇತರ ಭಾಷೆಗೆ ಅಥವಾ ಅನ್ಯ ಭಾಷೆಯಿಂದ ಅರೆಭಾಷೆಗೆ ಭಾಷಾಂತರಿಸಿದ ಕೃತಿಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದು. ಮತ್ತು ಈ ಅವಧಿಯಲ್ಲಿ ಕನಿಷ್ಟ 3 ಶೀರ್ಷಿಕೆಗಳಾದರೂ ಪ್ರಕಟವಾಗಿರಬೇಕು. ಹೆಚ್ಚು ಜನಮನ್ನಣೆ ಗಳಿಸಿದ ಪುಸ್ತಕದ ಮೂರು ಪ್ರಕಾರಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದು. ಪುಸ್ತಕಗಳ ತಲಾ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ‘ಗೌರವ ಪ್ರಶಸ್ತಿ-2019 ಯೋಜನೆ’ ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಮೇಲೆ ನಮೂದಿಸಲಾದ ಪ್ರಕಾರಗಳಲ್ಲಿ 2019 ರಲ್ಲಿ ಪ್ರಕಟವಾದ ಪುಸ್ತಕಗಳ ನಾಲ್ಕು ಪ್ರತಿಗಳನ್ನು ಲಕೋಟೆಯ ಮೇಲೆ ‘ಪುಸ್ತಕ ಬಹುಮಾನ ಯೋಜನೆ 2019’ ಎಂದು ಬರೆದು, ಅರ್ಜಿ ವಿವರಗಳನ್ನು ಅಧ್ಯಕ್ಷರು ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ-ಕೃಪ ಕಟ್ಟಡ, 1ನೇ ಮಹಡಿ, ರಾಜಾಸೀಟ್ ರಸ್ತೆ, ಮಡಿಕೇರಿ-571 201. ಈ ವಿಳಾಸಕ್ಕೆ ಕಳುಹಿಸಿಕೊಡುವುದು. ಅರ್ಜಿ ಸಲ್ಲಿಸಲು ತಾ. 14 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಕ್ಕೆ ಅಕಾಡೆಮಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.

ಗೌರವ ಪ್ರಶಸ್ತಿಗೆ

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2019ನೇ ಸಾಲಿನ ‘ಗೌರವ ಪ್ರಶಸ್ತಿ’ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರೆಭಾಷೆ ಸಾಹಿತ್ಯ, ಕಲೆ, ಸಂಸ್ಕøತಿ ಮತ್ತು ಅಧ್ಯಯನ ಮುಂತಾದ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರನ್ನು 2019 ರ ಸಾಲಿನ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರತಿಯೊಂದು ಕ್ಷೇತ್ರಕ್ಕೆ ಒಬ್ಬರಂತೆ 3 ಜನ ಸಾಧಕರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.

ಅರ್ಜಿಗಳನ್ನು ಸ್ವತಃ ಸಾಧಕರೇ ಸಲ್ಲಿಸಬಹುದು ಅಥವಾ ಸಾಧಕರ ಅಭಿಮಾನಿಗಳು ಶಿಫಾರಸ್ಸು ಮಾಡಿ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಗೆ ಅರ್ಹರಾಗಿರುವವರ ಕುರಿತಾಗಿ ಹೆಚ್ಚಿನ ಅಥವಾ ವಿಶೇಷ ಮಾಹಿತಿಗಳಿದ್ದಲ್ಲಿ ಅದನ್ನು ಅಕಾಡೆಮಿಗೆ ಒದಗಿಸಬಹುದು. ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಜೊತೆ ಎಲ್ಲಾ ಮಾಹಿತಿಗಳನ್ನು ಅಕಾಡೆಮಿಯ ನಿಗದಿತ ಅರ್ಜಿ ನಮೂನೆಯಲ್ಲಿಯೇ ಕಳುಹಿಸಬೇಕು. ಇದಕ್ಕೆ ಸಂಬಂಧಿಸಿ ನಿಗದಿತ ಅರ್ಜಿ ನಮೂನೆಯನ್ನು ಅಕಾಡೆಮಿಯ ಕಚೇರಿಯಿಂದ ಅಥವಾ ಅಕಾಡೆಮಿ ವೆಬ್‍ಸೈಟ್ ತಿತಿತಿ.ಚಿಡಿebhಚಿsheಚಿಛಿಚಿಜemಥಿ.ಛಿom ನಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಇತ್ತೀಚಿನ ಭಾವಚಿತ್ರ ಹಾಗೂ ದಾಖಲೆಗಳ ಪ್ರತಿಯೊಂದಿಗೆ ತಾ. 14 ರೊಳಗೆ ತಲುಪುವಂತೆ ಅಂಚೆ ಮೂಲಕ ಅಥವಾ ಖುದ್ದಾಗಿ ಬಂದು ಸಲ್ಲಿಸಬಹುದು ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.