ಸೋಮವಾರಪೇಟೆ, ಮಾ. 1: ವಿವಾಹ ನಿಶ್ಚಯವಾಗಿದ್ದ ಯುವತಿಯೋರ್ವಳು ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಟ್ಟಣ ಸಮೀಪದಲ್ಲಿರುವ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ, ಶಾಂತಳ್ಳಿ ಹೋಬಳಿಯ ಜಕ್ಕನಳ್ಳಿ ಗ್ರಾಮದ ನಿವಾಸಿ ಜೆ.ಜಿ. ರಮೇಶ್ ಎಂಬವರ ಮಗಳು ಜೆ.ಆರ್. ರಂಜಿತಾ ಕಾಣೆಯಾಗಿರುವ ವಿದ್ಯಾರ್ಥಿನಿ.
ಕಳೆದ ಫೆ. 24 ರಂದು ಕಾಲೇಜಿಗೆಂದು ತೆರಳಿದವಳು ನಂತರ ಮನೆಗೆ ಬಂದಿರುವದಿಲ್ಲ. ರಂಜಿತಾಗೆ ತಾ. 8 ರಂದು ಕೊಡ್ಲಿಪೇಟೆಯ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಈ ಮಧ್ಯೆ ರಂಜಿತ ಕಾಣೆಯಾಗಿದ್ದು, ಬೇರೋರ್ವ ಯುವಕನೊಂದಿಗೆ ಊಟ ಮಾಡುತ್ತಿರುವ ಫೋಟೋವನ್ನು ಮದುವೆ ನಿಶ್ಚಯವಾಗಿದ್ದ ಯುವಕನಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ.