ಪಾಲಂದಿರ ಪಿ. ನವೀನ್ ತಂಡ ಪ್ರಥಮ
ಶ್ರೀಮಂಗಲ, ಮಾ. 1: ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆಯಲ್ಲಿ ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜು ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದು, ವಿದ್ಯಾರ್ಥಿಗಳ ತಂಡದ ನಾಯಕತ್ವವನ್ನು ಮೂಲತಃ ಕೊಡಗಿನ ಹಿರಿಯ ವಕೀಲ ಪಾಲಂದಿರ ಪೆಮ್ಮಯ್ಯ ಅವರ ಪುತ್ರ ಪಾಲಂದಿರ ನವೀನ್ ವಹಿಸಿದ್ದರು.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ದೇಶದ ಹಲವಾರು ಪ್ರತಿಷ್ಠಿತ ಕಾನೂನು ಕಾಲೇಜುಗಳ 28 ತಂಡಗಳು ಪಾಲ್ಗೊಂಡಿದ್ದವು. ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕಲ್ ಕುನಃ ಬಹುಮಾನ ವಿತರಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಪ್ರಥಮ ಬಹುಮಾನಗಳಿಸಿದ ಪಾಲಂದಿರ ಪಿ. ನವೀನ್ ನಾಯಕತ್ವದ ತಂಡದಲ್ಲಿ ಸಲೋನಿ ಅಲವೇರ ಹಾಗೂ ವಿವೇಕ್ ಅರ್ಜುನ್ ಪಾಲ್ಗೊಂಡಿದ್ದರು.