ಹೆಬ್ಬಾಲೆ, ಫೆ. 29: ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಶುಕ್ರವಾರ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.

ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಎಲ್. ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಅವರು ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ವಿಜ್ಞಾನ ಶಿಕ್ಷಕ ಬಸವರಾಜ ಶೆಟ್ಟಿ ಮಾತನಾಡಿ ಬೀಜ ಪ್ರಸರಣದ ಮಹತ್ವ ಮತ್ತು ಪರಿಸರದಲ್ಲಿರುವ ಕೆಲವೊಂದು ಸಸ್ಯ ಪ್ರಭೇದಗಳ ಬಗ್ಗೆ ಮಾಹಿತಿ ನೀಡಿದರು. ಸಸ್ಯಗಳ, ಪ್ರಾಣಿಗಳ ವೈಜ್ಞಾನಿಕ ಹೆಸರುಗಳ ಪರಿಚಯ ಕುರಿತು ಪ್ರಬಂಧ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಈ ಸಂದರ್ಭ ಮುಖ್ಯ ಶಿಕ್ಷಕ ಗಣೇಶ್, ಪ್ರಾಂಶುಪಾಲ, ಧರ್ಮಪ್ಪ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಬಳಿಕ ವಿದ್ಯಾರ್ಥಿಗಳಿಗಾಗಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು. ಈ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನೌಕರ ರಾಜೇಶ್ ಉದ್ಘಾಟಿಸಿದರು ವಿದ್ಯಾರ್ಥಿಗಳು ಬಗೆ ಬಗೆಯ ತರಕಾರಿಗಳನ್ನು, ತಿಂಡಿ ತಿನಿಸುಗಳನ್ನು ತಾವೇ ತಯಾರಿಸಿ ಮಾರಾಟ ಮಾಡಿದರು. ಮಕ್ಕಳ ಸಂತೆಯಿಂದ ಗಳಿಸಿದ ಲಾಭ ಖರ್ಚುವೆಚ್ಚಗಳ ಬಗ್ಗೆ ಇಂಗ್ಲಿಷ್ ಅಧ್ಯಾಪಕ ಮುತ್ತಣ್ಣ ಮಾಹಿತಿ ನೀಡಿದರು. ಶಿಕ್ಷಕ ವೆಂಕಟನಾಯಕ ನಿರೂಪಿಸಿದರು. ಡಿ ಕವಿತಾ ಸ್ವಾಗತಿಸಿದರು. ಸಿ.ಡಿ. ಲೋಕೇಶ್ ವಂದಿಸಿದರು.