*ಗೋಣಿಕೊಪ್ಪಲು, ಫೆ. 29: ಶ್ರೀ ರಾಮಕೃಷ್ಣ ಪರಮಹಂಸರ 185ನೇ ಜನ್ಮ ದಿನೋತ್ಸವದ ಪ್ರಯುಕ್ತ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗ ಆದರಿತ ಕಗ್ಗ ಮ್ಯಾಜಿಕ್ ಕಾರ್ಯಕ್ರಮ ನಡೆಯಿತು.

ಆಶ್ರಮದ ಸಂಭಾವನಂದಾಜೀ ಸಭಾಂಗಣದಲ್ಲಿ ಪೆÇನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪನಾಂದರವರ ಅಧ್ಯಕ್ಷತೆಯಲ್ಲಿ ಚಲನಚಿತ್ರ ನಿರ್ದೇಶಕ ಡಾ. ಎಂ.ಡಿ. ಕೌಶಿಕ್ ಅವರಿಂದ ಕಗ್ಗದ ತಾತ್ಪರ್ಯ, ಭಾವಾರ್ಥ ಮತ್ತು ವ್ಯಾಖ್ಯಾನಗಳು ನಡೆದವು.

ಇದೇ ಸಂದರ್ಭ ಆಶ್ರಮದ ಸ್ವಾಮೀಜಿಗಳಾದ ಇಷ್ಟ ಸೇವಾನಂದಾಜೀ ಮತ್ತು ಪರಹಿತನಂದಾಜೀ ಇವರುಗಳಿಂದ ವಿಶೇಷ ಭಜನೆ ಮತ್ತು ಆರತಿ ನಡೆಯಿತು. ಮಂಗಳಾರ್ಥಿ, ಉಷಾಕೀರ್ತನೆ, ವಿಷ್ಣು ಸಹಸ್ರನಾಮ, ಹೋಮ, ಪ್ರವಚನ, ವಿಶೇಷ ಪೂಜೆಗಳು ನಡೆದವು. ಬಾಳೆಲೆ ಕಾವೇರಿ ಕಲಾ ಸಮಿತಿಯಿಂದ ಭಜನೆ ಕಾರ್ಯಕ್ರಮ ಸೇರಿದಂತೆ ವಿವಿಧ ವಿಶೇಷ ಪೂಜೆಗಳು ನಡೆದವು.