ಮಡಿಕೇರಿ, ಫೆ. 29 : ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಿಐಟಿಯು ಸಂಘಟನೆಯ ವತಿಯಿಂದ ಹಂಡ್ಲಿ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಯಿತು.

ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಗ್ರಾಮ ಪಂಚಾಯತಿ ಪಿಡಿಓ ಸ್ಮಿತಾ ಅವರಿಗೆ ಸಲ್ಲಿಸಿದರು. ಈ ಸಂದರ್ಭ ಸಂಘಟನೆಯ ಪ್ರಮುಖರಾದ ಪಿ.ಆರ್ ಭರತ್, ಮಹೇಶ್, ಎಲ್. ರವಿ, ಶ್ರೀಧರ್, ಚೆನ್ನಬಸವ, ಶಿವರುದ್ರ, ದಯಾನಂದ್ ಮತ್ತಿತರರು ಇದ್ದರು.