ನಾಪೆÇೀಕ್ಲು, ಫೆ. 28: 2018ರಲ್ಲಿ ನಾಪೆÉÇೀಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ಕುಲ್ಲೇಟಿರ ಕಪ್ಗೆ ಸಂಸದ ಪ್ರತಾಪ್ ಸಿಂಹ ಮೈದಾನದ ನವೀಕರಣಕ್ಕೆ ರೂ. 20 ಲಕ್ಷ ಅನುದಾನ ನೀಡಿದ್ದರು.
ಈ ಮೊತ್ತವನ್ನು ಕುಲ್ಲೇಟಿರ ಕುಟುಂಬದ ಅಧ್ಯಕ್ಷ ಮತ್ತು ಸದಸ್ಯರು ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನವನ್ನು ಮಿನಿ ಕ್ರೀಡಾಂಗಣವನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಕ್ರೀಡಾಂಗಣದ ತಡೆಗೋಡೆ ಮತ್ತು ಗ್ಯಾಲರಿ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ.
ಕಾಮಗಾರಿ ವೀಕ್ಷಿಸಲು ಆಗಮಿಸಿದ್ದ ಕುಲ್ಲೇಟಿರ ಕುಟುಂಬದ ಕ್ರೀಡಾ ಸಮಿತಿಯ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ, ಕಾರ್ಯದರ್ಶಿ ಕುಲ್ಲೇಟಿರ ಅಜೀತ್ ನಾಣಯ್ಯ ಮತ್ತು ಸಂಚಾಲಕ ಕುಲ್ಲೇಟಿರ ಅರುಣ ಬೇಬ ‘ಶಕ್ತಿ’ಗೆ ಈ ಬಗ್ಗೆ ಮಾಹಿತಿ ನೀಡಿದರು.
ಕಾಮಗಾರಿ ಕಳಪೆ ಆಗದಂತೆ ನಾವು ಎಚ್ಚರ ವಹಿಸುತ್ತಿದ್ದು, ಈ ವಿಭಾಗದ ಹಾಕಿ ಪ್ರೇಮಿಗಳು, ಸಾರ್ವಜನಿಕರು ಕೂಡ ಈ ಬಗ್ಗೆ ನಿಗಾ ವಹಿಸಬೇಕು ಎಂದು ಶಂಭು ಮಂದಪ್ಪ ಹೇಳಿದರು.