ಮಡಿಕೇರಿ, ಫೆ. 28: ಕೊಡಗು ಜಿಲ್ಲಾ ಪಂಚಾಯತ್ನ ಹಾಲಿ ಅಧಿಕಾರಾವಧಿ ಇದೀಗ ಬಹುತೇಕ ನಾಲ್ಕು ವರ್ಷಗಳನ್ನು ಪೂರೈಸುವತ್ತ ಹೆಜ್ಜೆ ಹಾಕಿದೆ. ಈ ಬಾರಿಯ ಜಿ.ಪಂ. ಚುನಾವಣೆಯ ಸಂದರ್ಭ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸಂಪೂರ್ಣ ಐದು ವರ್ಷಗಳ ಅಧಿಕಾರಾವಧಿಗೆ ಅವಕಾಶ ನೀಡಿ ಈ ಹಿಂದಿನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಇದರಂತೆ ಅಧ್ಯಕ್ಷರಾಗಿ ಪರಿಶಿಷ್ಟ ಜಾತಿ ಮೀಸಲಾತಿಯಡಿಯಲ್ಲಿ ಕಡಗದಾಳು ಕ್ಷೇತ್ರದ ಅಭ್ಯರ್ಥಿ ಬಿ.ಎ. ಹರೀಶ್ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮಡಿಕೇರಿ, ಫೆ. 28: ಕೊಡಗು ಜಿಲ್ಲಾ ಪಂಚಾಯತ್ನ ಹಾಲಿ ಅಧಿಕಾರಾವಧಿ ಇದೀಗ ಬಹುತೇಕ ನಾಲ್ಕು ವರ್ಷಗಳನ್ನು ಪೂರೈಸುವತ್ತ ಹೆಜ್ಜೆ ಹಾಕಿದೆ. ಈ ಬಾರಿಯ ಜಿ.ಪಂ. ಚುನಾವಣೆಯ ಸಂದರ್ಭ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸಂಪೂರ್ಣ ಐದು ವರ್ಷಗಳ ಅಧಿಕಾರಾವಧಿಗೆ ಅವಕಾಶ ನೀಡಿ ಈ ಹಿಂದಿನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಇದರಂತೆ ಅಧ್ಯಕ್ಷರಾಗಿ ಪರಿಶಿಷ್ಟ ಜಾತಿ ಮೀಸಲಾತಿಯಡಿಯಲ್ಲಿ ಕಡಗದಾಳು ಕ್ಷೇತ್ರದ ಅಭ್ಯರ್ಥಿ ಬಿ.ಎ. ಹರೀಶ್ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ 20 ತಿಂಗಳ ಮೂರು ಅವಧಿ ಇದಕ್ಕೆ ಸಂಬಂಧಿಸಿದೆ. ಇದರಂತೆ 2016ರಲ್ಲಿ ನಡೆದ ಚುನಾವಣೆಯ ಬಳಿಕ ಪ್ರಥಮ ಅವಧಿಯ ಸ್ಥಾಯಿ ಸಮಿತಿಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಮೂಕೋಂಡ ವಿಜು ಸುಬ್ರಮಣಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮೂಕೋಂಡ ಶಶಿ ಸುಬ್ರಮಣಿ ಹಾಗೂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸ್ ಅವರುಗಳು ಕಾರ್ಯ ನಿರ್ವಹಿಸಿದ್ದರು.ಎರಡನೇ ಅವಧಿ ಸ್ಥಾಯಿ ಸಮಿತಿಯ ಎರಡನೇ ಅವಧಿಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಸಿ.ಕೆ. ಬೋಪಣ್ಣ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹಾಗೂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸರೋಜಮ್ಮ ಅವರು ನೇಮಕ ಗೊಂಡಿದ್ದರು.ತಾ. 29ಕ್ಕೆ (ಇಂದು) ಅವಧಿ ಅಂತ್ಯ
ಇದೀಗ ಸ್ಥಾಯಿಸಮಿತಿಯ ಎರಡನೆಯ ಅವಧಿಯ ಅಧಿಕಾರಾವಧಿ ತಾ. 29ಕ್ಕೆ ಮುಕ್ತಾಯಗೊಳ್ಳಲಿದ್ದು ಕೊನೆಯ ಅವಧಿಗೆ ನೂತನ ಅಧ್ಯಕ್ಷರುಗಳ ನೇಮಕವಾಗಬೇಕಿದೆ.
ಬಿ.ಜೆ.ಪಿ.ಯಲ್ಲಿ ಬಿರುಸು ಕೊಡಗು ಜಿ.ಪಂ.ಗೆ ಚುನಾವಣೆ ನಡೆದ ಸಂದರ್ಭದಲ್ಲಿ ಒಟ್ಟು 29 ಸದಸ್ಯ ಸ್ಥಾನದ ಪೈಕಿ ಬಿ.ಜೆ.ಪಿ. 18ರಲ್ಲಿ ಕಾಂಗ್ರೆಸ್ 10ರಲ್ಲಿ ಹಾಗೂ ಜೆ.ಡಿ.ಎಸ್ ಒಂದು ಸ್ಥಾನದಲ್ಲಿ ಜಯಗಳಿಸಿತ್ತು.ಬಹುಮತದಂತೆ ಬಿ.ಜೆ.ಪಿ ನಿರಾಯಾಸವಾಗಿ ಅಧಿಕಾರ ನಡೆಸುತ್ತಿದ್ದು ಈತನಕ ಅಧ್ಯಕ್ಷ-ಉಪಾಧ್ಯಕ್ಷರೂ ಸೇರಿ ಒಟ್ಟು 8 ಮಂದಿಗೆ ಅಧಿಕಾರ ದೊರೆತಿದೆ. ಇದೀಗ ಕೊನೆಯ ಅವಧಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಸ್ಥಾನಕ್ಕೆ ಬಿ.ಜೆ.ಪಿ.ಯಲ್ಲಿ ಉಳಿದ ಸದಸ್ಯರಲ್ಲಿ ಪೈಪೋಟಿ ಇದೆ.
ಜಿ.ಪಂ.ನಲ್ಲಿ ಒಟ್ಟು ಐದು ಸ್ಥಾಯಿ ಸಮಿತಿಗಳಿದ್ದು, ಇದರಲ್ಲಿ ಹಣಕಾಸು ಸ್ಥಾಯಿ ಸಮಿತಿಗೆ ಜಿ.ಪಂ. ಅಧ್ಯಕ್ಷರು ಹಾಗೂ ಸಾಮಾನ್ಯ ಸ್ಥಾಯಿ ಸಮಿತಿಗೆ ಉಪಾಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಕೊನೆಯ ಅವಧಿಗೂ ಇದೇ ಮುಂದುವರಿಯ ಲಿರುವುದರಿಂದ ತಾಲೂಕುವಾರು ಲೆಕ್ಕಾಚಾರಗಳು ನಡೆಯುತ್ತಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ ನೇಮಕಕ್ಕೆ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿದು ಬಂದಿದೆ. ಆದರೂ ಇಲ್ಲಿ ಪಕ್ಷ ಪ್ರಮುಖರು ಮುಖಂಡರ ನಿರ್ಧಾರವೇ ಅಂತಿಮವೆನ್ನ ಲಾಗುತ್ತಿದೆ.
ಸಿಗಲಿದೆ ಎಂಬದು ಇದೀಗ ಕುತೂಹಲ ಕಾರಿಯಾಗಿದೆ. ಐದು ಸ್ಥಾಯಿ ಸಮಿತಿಗಳ ಪೈಕಿ ಜಿ.ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಒಂದೊಂದು ಸಮಿತಿ ಅಧ್ಯಕ್ಷರಾಗಿ ಮುಂದುವರಿಯಲಿರುವದರಿಂದ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿಗೆ ಈ ಪ್ರಾತಿನಿಧ್ಯ ಎಂದಿನಂತೆ ಸಿಗಲಿದೆ. ಈ ಹಿನ್ನೆಲೆ ವೀರಾಜಪೇಟೆ ತಾಲೂಕಿನ ಭವ್ಯ ಹಾಗೂ ಮಹೇಶ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ವೀರಾಜಪೇಟೆ ತಾಲೂಕಿ ನಿಂದ ಪ್ರಬಲವಾಗಿ ಕೇಳಿಬರುತ್ತಿದೆ ಎಂದು ಹೇಳಲಾಗುತ್ತಿದೆ. ರಾಜಕೀಯ ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ಪಕ್ಷ ಯಾರಿಗೆ ಈ ಬಾರಿಯ ಉಳಿಕೆ ಅವಧಿಯ ಅಧಿಕಾರ ನೀಡಲಿದೆ ಎಂಬದನ್ನು ಕಾದು ನೋಡಬೇಕಿದೆ.
- ಶಶಿ ಸೋಮಯ್ಯ