ಆಲೂರುಸಿದ್ದಾಪುರ, ಫೆ. 29: ಬೈಕ್ ಮತ್ತು ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಾಲಂಬಿ ಗ್ರಾಮದ ಕೊರಲಿಕೆರೆ ಬಳಿ ನಡೆದಿದೆ.

ಅಂಕನಹಳ್ಳಿ ಸಮೀಪದ ಮೆಣಸ ಗ್ರಾಮದ ಎನ್.ಎಸ್. ಬಸವರಾಜು (38) ಮೃತಪಟ್ಟ ಬೈಕ್ ಸವಾರ. ರೈತ ಬಸವರಾಜು ಹೆಬ್ಬಾಲೆಯ ಹಾರ್ಡ್‍ವೆರ್ ಅಂಗಡಿಯೊಂದರಿಂದ ಕೃಷಿ ನೀರಾವರಿಗಾಗಿ ಬೇಕಾದ ಪೈಪ್‍ಗಳನ್ನು ಖರೀದಿಸಿ ತನಗೆ ಸೇರಿದ ಸ್ಪ್ಲೆಂಡರ್ ಬೈಕ್‍ನಲ್ಲಿಟ್ಟುಕೊಂಡು ಮನೆಗೆ ವಾಪಾಸಾಗುತಿದ್ದಾಗ ಮಾಲಂಬಿ ಕೊರಲಿಕೆರೆ ಬಳಿ ಶನಿವಾರಸಂತೆ ಕಡೆಯಿಂದ ಬರುತಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಡಿಕ್ಕಿಯಾಗಿದ್ದು, ಬಸವರಾಜು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಬಸವರಾಜು ವಿವಾಹಿತನಾಗಿದ್ದು ಪತ್ನಿ ಇಬ್ಬರು ಮಕ್ಕಳಿದ್ದಾರೆ.