ಮಡಿಕೇರಿ, ಫೆ. 29: ಕೊಡಗು ಜಿಲ್ಲೆಗೆ ಕರ್ನಾಟಕ ರಾಜ್ಯ ವಕ್ಛ್ ಮಂಡಳಿ ಸದಸ್ಯರುಗಳಾದ ಮೌಲಾನಾ ಶಾಫಿ ಸಹದಿ ಮತ್ತು ಯಹಕೂಬ್ ಯೂಸಫ್ ಶಿವಮೊಗ್ಗ ಅವರು ತಾ. 2 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಕೊಟ್ಟಮುಡಿ ಮರ್ಕಜ್ ಸಂಸ್ಥೆಗೆ ಆಗಮಿಸಲಿದ್ದು, ಅಲ್ಲಿ ಜಿಲ್ಲೆಯ ಮುಸ್ಲಿಂ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆನಂತರ ಎಮ್ಮೆಮಾಡು ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ಮಂಗಳೂರಿಗೆ ತೆರಳಲಿದ್ದಾರೆ.