ಮಡಿಕೇರಿ, ಫೆ. 29: ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ-ಗೂನಡ್ಕ ಇಲ್ಲಿ ಮೂರು ದಿವಸಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ಶುಕ್ರವಾರದ ಜುಮಾ ನಮಾಝ್‍ನ ಬಳಿಕ ಮುಹೀದಿನ್ ಜುಮಾ ಮಸೀದಿಯ ಗೌರವಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಧ್ವಜಾರೋಹರಣ ಮಾಡುವ ಮೂಲಕ ಚಾಲನೆ ನೀಡಿದರು.

ದುವಾವನ್ನು ಎಂ.ಜೆ.ಎಂ ಪೇರಡ್ಕ ಖತೀಬ್ ಮಹಮ್ಮದ್ ಆಶ್ರಫ್ ಫೈಝಿ ನೆರವೇರಿಸಿದರು. ದರ್ಗಾದಲ್ಲಿ ಅಲಂಕಾರ ಮತ್ತು ಧ್ವಜಾರೋಹಣವು ಜಮಾಅತ್ ಅಧ್ಯಕ್ಷ ಟಿ.ಇ. ಆರೀಫ್‍ತೆಕ್ಕಿಲ್ ನೇತೃತ್ವದಲ್ಲಿ ನಡೆಯಿತು. ಸಮಾರಂಭದಲ್ಲಿ ಜಿ.ಕೆ. ಹಮೀದ್ ಗೂನಡ್ಕ, ಸದರ್ ಝಕರಿಯಾ ದಾರಿಮಿ, ಅಬ್ದುಲ್ ಅಝೀಝ್ ಝೈನಿ ಪೇರಡ್ಕ, ಮಾಜಿ ಅಧ್ಯಕ್ಷ ಆಲಿ ಹಾಜಿ, ಊರೂಸ್ ಸಮಿತಿ ಅಧ್ಯಕ್ಷ ಎನ್.ಎಚ್ ಹಾರೀಸ್, ಜಮಾಅತ್ ಕಾರ್ಯದರ್ಶಿ ಪಿ.ಕೆ.ಉಮ್ಮರ್ ಗೂನಡ್ಕ, ಎಸ್.ಕೆ.ಎಸ್.ಎಸ್.ಎಫ್. ಮಾಜಿ ಅಧ್ಯಕ್ಷ ಮುನೀರ್ ದಾರಿಮಿ, ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಸದಸ್ಯ ತಾಜುದ್ಧೀನ್ ಟರ್ಲಿ, ಎಂ.ಆರ್.ಡಿ.ಎ. ಅಧ್ಯಕ್ಷ ರಜಾಕ್ ಹಾಜಿ ತೆಕ್ಕಿಲ್, ಇಬ್ರಾಹಿಂ ಶೆಟ್ಟಿಯಡ್ಕ, ಟಿ.ಎಂ. ಖಾದರ್ ತೆಕ್ಕಿಲ್, ಟಿ.ಎಂ. ಬಶೀರ್ ತೆಕ್ಕಿಲ್, ಪಾಂಡಿ ಅಬ್ಬಾಸ್, ಮೊಯಿದು ದರ್ಖಾಸ್, ಅಕ್ಬರ್ ಕರಾವಳಿ ಶೆಟ್ಟಿಯಡ್ಕ, ಮೂಸಾನ್ ಅರಂತೋಡು ಮೊದಲಾದವರು ಪಾಲ್ಗೊಂಡಿದ್ದರು. ಜಿ.ಕೆ.ಹಮಿದ್ ಸ್ವಾಗತಿಸಿ, ಊರೂಸ್ ಸಮಿತಿ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು.