ವೀರಾಜಪೇಟೆ, ಫೆ. 29: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಡಗನ್ನೂರುವಿನಲ್ಲಿರುವ ಶ್ರೀಕೋಟಿ ಚೆನ್ನಯ್ಯ ಗೆಜ್ಜೆಗಿರಿ ನಂದನ ಬಿತ್ತ್‍ಲ್ ದೇಯಿ ಬೈದ್ಯೆತಿನಲ್ಲಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಉತ್ಸವಕ್ಕೆ ವೀರಾಜಪೇಟೆ ತಾಲೂಕಿನ ಬಿಲ್ಲವ ಸೇವಾ ಸಮಿತಿ ವತಿಯಿಂದ ಹೊರೆಕಾಣಿಕೆ ಸಲ್ಲಿಸಲಾಯಿತು.

ವೀರಾಜಪೇಟೆಯ ಬಿಟ್ಟಂಗಾಲ ಗ್ರಾಮದ ಅಂಬಟ್ಟಿಯ ಶ್ರೀ ನಾರಾಯಣ ಗುರು ಮಂದಿರದ ಆವರಣದಲ್ಲಿ ಶ್ರೀ ಕ್ಷೇತ್ರದಲ್ಲಿ ಜರುಗುವ ಉತ್ಸವಕ್ಕೆ ತಾಲ್ಲೂಕುವಿನ ವಿವಿದ ಭಾಗಗಳಿಂದ ಜನಾಂಗ ಬಾಂಧವರಿಂದ ಸಂಗ್ರಹಗೊಂಡ ಅಕ್ಕಿ, ದ್ವಿದಳ ಧಾನ್ಯಗಳು, ಬೆಲ್ಲ ತರಕಾರಿಗಳು, ಹೂ ಮುಂತಾದ ವಸ್ತುಗಳು ಸಂಗ್ರಹಿಸಿ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಸಲ್ಲಿಸಲಾಯಿತು.

ಕ್ಷೇತ್ರದ ಬ್ರಹ್ಮ ಕಲಶೋತ್ಸವವು ತಾ. 25ರಿಂದ ಆರಂಭಗೊಂಡಿದ್ದು ಮಾರ್ಚ್ 2 ರಂದು ದೇವತಾ ಕಾರ್ಯ ಮತ್ತು ಸಾÀಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಳ್ಳಲಿದೆ. ಹೊರೆಕಾಣಿಕೆಯು ಗುರು ಮಂದಿರದಿಂದ ಹೊರಡುವ ವೇಳೆಯಲ್ಲಿ ತಾಲೂಕು ಬಿಲ್ಲವ ಸೇವಾ ಸಮಿತಿಯ ಅಧ್ಯಕ್ಷ ಬಿ.ಎಂ. ಗಣೇಶ್, ಉಪಾಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಜನಾರ್ಧನ ಬಿ.ಎಸ್, ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಜಿ. ನಾರಾಯಣ, ಸದಸ್ಯರಾದ ಸೋಮಪ್ಪ ಮತ್ತು ರೂಪ ಸೋಮಪ್ಪ ಸಮಿತಿಯೊಂದಿಗೆ 20 ಮಂದಿ ಸದಸ್ಯರ ತಂಡ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆಯೊಂದಿಗೆ ತೆರಳಿದರು.