ನಾಪೆÇೀಕ್ಲು, ಫೆ. 29: ವಿದ್ಯಾರ್ಥಿ ಗಳು ತಮ್ಮ ಮನಸ್ಸಿನಲ್ಲಿರುವ ಪರೀಕ್ಷಾ ಭಯವನ್ನು ಮೊದಲು ಕಿತ್ತೊಗೆಯಬೇಕು ಆಗ ಮಾತ್ರ ನೆಮ್ಮದಿಯಿಂದ ಪರೀಕ್ಷೆ ಬರೆದು ನಿರೀಕ್ಷಿತ ಅಂಕದೊಂದಿಗೆ ಉತ್ತೀರ್ಣರಾಗಲು ಸಾಧ್ಯ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕೊಡಗು ವಿಕಸನ ಸಂಸ್ಥೆಯ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನಾಪೆÇೀಕ್ಲು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪರೀಕ್ಷೆ ನಾಪೆÇೀಕ್ಲು, ಫೆ. 29: ವಿದ್ಯಾರ್ಥಿ ಗಳು ತಮ್ಮ ಮನಸ್ಸಿನಲ್ಲಿರುವ ಪರೀಕ್ಷಾ ಭಯವನ್ನು ಮೊದಲು ಕಿತ್ತೊಗೆಯಬೇಕು ಆಗ ಮಾತ್ರ ನೆಮ್ಮದಿಯಿಂದ ಪರೀಕ್ಷೆ ಬರೆದು ನಿರೀಕ್ಷಿತ ಅಂಕದೊಂದಿಗೆ ಉತ್ತೀರ್ಣರಾಗಲು ಸಾಧ್ಯ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕೊಡಗು ವಿಕಸನ ಸಂಸ್ಥೆಯ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನಾಪೆÇೀಕ್ಲು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪರೀಕ್ಷೆ ಗಳಿಗೆ ಕಿವಿಮಾತು ಹೇಳಿದರು.

ಸಂವಾದದಲ್ಲಿ ಈ ವ್ಯಾಪ್ತಿಯ ಕಡಂಗ, ಚೆಯ್ಯಂಡಾಣೆ, ಕಕ್ಕಬ್ಬೆ, ಪಾರಾಣೆ, ಬಲ್ಲಮಾವಟಿ, ಭಾಗಮಂಡಲ, ಚೇರಂಬಾಣೆ, ನಾಪೋಕ್ಲು, ಹೊದವಾಡ ಮತ್ತಿತರ ಪ್ರೌಢಶಾಲೆಗಳ 820 ಹತ್ತನೇ ತರಗತಿ ಗಳಿಗೆ ಕಿವಿಮಾತು ಹೇಳಿದರು.

ಸಂವಾದದಲ್ಲಿ ಈ ವ್ಯಾಪ್ತಿಯ ಕಡಂಗ, ಚೆಯ್ಯಂಡಾಣೆ, ಕಕ್ಕಬ್ಬೆ, ಪಾರಾಣೆ, ಬಲ್ಲಮಾವಟಿ, ಭಾಗಮಂಡಲ, ಚೇರಂಬಾಣೆ, ನಾಪೋಕ್ಲು, ಹೊದವಾಡ ಮತ್ತಿತರ ಪ್ರೌಢಶಾಲೆಗಳ 820 ಹತ್ತನೇ ತರಗತಿ ಗಳಿಗೆ ಕಿವಿಮಾತು ಹೇಳಿದರು.

ಸಂವಾದದಲ್ಲಿ ಈ ವ್ಯಾಪ್ತಿಯ ಕಡಂಗ, ಚೆಯ್ಯಂಡಾಣೆ, ಕಕ್ಕಬ್ಬೆ, ಪಾರಾಣೆ, ಬಲ್ಲಮಾವಟಿ, ಭಾಗಮಂಡಲ, ಚೇರಂಬಾಣೆ, ನಾಪೋಕ್ಲು, ಹೊದವಾಡ ಮತ್ತಿತರ ಪ್ರೌಢಶಾಲೆಗಳ 820 ಹತ್ತನೇ ತರಗತಿ ಎಂದು ಹೇಳಿದ ಅವರು ಮುಂದಿನ ವರ್ಷಗಳಿಂದ ಶಿಕ್ಷಕರ ತರಬೇತಿಯನ್ನು ಕಡಿತಗೊಳಿಸಿ ಪಠ್ಯದತ್ತ ಹೆಚ್ಚಿನ ಗಮನ ಹರಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ಬ್ಲೂಪ್ರಿಂಟ್ ಶಿಕ್ಷಕರಿಗೆ ಸಂಬಂಧಿಸಿದ ವಿಚಾರ ಎಂದ ಅವರು ಈ ಬಾರಿ ಪರೀಕ್ಷಾ ಸಮಯವನ್ನು ಅರ್ಧ ಗಂಟೆ ಹೆಚ್ಚಿಸಲಾಗುವದು. ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಉತ್ತಮ ಸಲಹೆ ಯಾಗಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದರು. ಜಾತಿ ದೃಢೀಕರಣ ಪತ್ರದ ಬಗ್ಗೆ ಮಾಹಿತಿ ನೀಡಿದ ಅವರು ಜಾತ್ಯಾತೀತ ಸಮಾಜ ನಿರ್ಮಾಣ ವಾಗಬೇಕು ಎನ್ನುವದು ನನ್ನ ಆಶಯ ಕೂಡ. ಇದಕ್ಕೆ ಇನ್ನೂ ಕಾಲಾವಕಾಶ ಬೇಕು. ಸಮಾಜದಲ್ಲಿ ಇನ್ನೂ ಕೀಳರಿಮೆಯಿಂದ ಬದುಕುತ್ತಿರುವ ಜನ ಇದ್ದಾರೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿಯ ಸವಲತ್ತುಗಳ ಅಗತ್ಯವಿದೆ ಎಂದರು. ಇಲ್ಲಿ ಭಾಗವಹಿಸಿರುವ ಎಲ್ಲಾ ಶಾಲೆಗಳಿಗೆ ಒಂದು ವಾರದ ಒಳಗೆ ಶಿಕ್ಷಣ ಇಲಾಖಾಧಿಕಾರಿಗಳು ಭೇಟಿ ನೀಡಲಿದ್ದು ನಿಮ್ಮ ಸಮಸ್ಯೆಗಳನ್ನು ಅವರು ಬಗೆಹರಿಸಲಿದ್ದಾರೆ ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳಲ್ಲಿ ಓದಿನ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ವರ್ಷದಿಂದ 7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ಆರಂಭಿಸ ಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಮುಗಿಯುವವರೆಗೆ ಮೊಬೈಲ್‍ನಿಂದ ದೂರವಿರಬೇಕು ಎಂದು ಸಲಹೆ ನೀಡಿದ ಅವರು, ಪೊಷಕರು ಮಕ್ಕಳಿಗೆ ಒತ್ತಡ ಹಾಕುವದನ್ನು ಬಿಟ್ಟು ಪ್ರೀತಿಯಿಂದ ನೋಡಿಕೊಳ್ಳಬೇಕು.

(ಮೊದಲ ಪುಟದಿಂದ) ಮಕ್ಕಳನ್ನು ಓದಲು ಬಿಟ್ಟು ಪೊಷಕರು ಟಿ.ವಿ.ನೋಡುವದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಕೊಡಗು ವಿಕಸನ ಸಂಸ್ಥೆಯ ಮುಖಂಡ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸ್ಥಾಪಿಸಿರುವ ವಿಕಸನ ಸಂಸ್ಥೆಯ ಪ್ರೇರಣೆಯೊಂದಿಗೆ ಕೊಡಗಿನಲ್ಲಿ ವಿಕಸನ ಸಂಸ್ಥೆಯನ್ನು ಮೂರು ತಿಂಗಳ ಹಿಂದೆ ಆರಂಭಿಸಿದ್ದೇವೆ. ಸಂಸ್ಥೆಯ ಮೂಲಕ ಮಾಜಿ ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಅವರಿಂದ ಹಲವು ವಿದ್ಯಾ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗಿದೆ. ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೂ ಕೊಡಗು ವಿಕಸನ ಸಂಸ್ಥೆ ಸಹಕಾರ ನೀಡಲಿದೆ ಎಂದು ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚ್ಚಾಡೋ ವಿಕಸನ ಸಂಸ್ಥೆಯ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ವಹಿಸಿದ್ದರು.

ವೇದಿಕೆಯಲ್ಲಿ ಕೊಡಗು ವಿಕಸನ ಸಂಸ್ಥೆಯ ಮುಖಂಡ ಚೆಯ್ಯಂಡ ಸತ್ಯ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು, ಕೂಡಿಗೆ ಡಯಟ್, ಉಪನಿರ್ದೇಶಕ ಶ್ರೀಧರನ್ ಮತ್ತಿತರರಿದ್ದರು. ನಾಪೋಕ್ಲು ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಸ್ವಾಗತಿಸಿ, ವಿಕಸನ ಸಂಸ್ಥೆಯ ಪ್ರಮುಖ ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿ, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ವಂದಿಸಿದರು.

ಕಾರ್ಯಕ್ರಮ ಬಳಿಕೆ ಸಮೀಪದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಸಚಿವರು ಎಲ್.ಕೆ.ಜಿ ಮಕ್ಕಳ ಆಟದ ಕೊಠಡಿಯನ್ನು ಉದ್ಘಾಟಿಸಿದರು. ನಂತರ ವಿಜ್ಞಾನ ಸಂಘ, ಭಾಷಾ ಸಂಘವನ್ನು ವೀಕ್ಷಿಸಿದರು. ಬಳಿಕ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿ ಗಳೊಂದಿಗೆ ಕುಳಿತು ಬಿಸಿಯೂಟ ಸವಿದರು.

ಮಡಿಕೇರಿಯ ಸಂತಜೋಸೆಫರ ಪ್ರೌಢಶಾಲೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೀವನದ ಕೊನೆಯ ಹಂತವಲ್ಲ. ಜೀವನದಲ್ಲಿ ಹಲವು ಪರೀಕ್ಷೆಗಳನ್ನು ನಿರಂತರವಾಗಿ ಎದುರಿಸಬೇಕಾಗುತ್ತದೆ. ಅದರಲ್ಲಿ ಎಸ್‍ಎಸ್‍ಎಲ್ಸಿ ಪರೀಕ್ಷೆ ಒಂದು ಪರೀಕ್ಷೆಯಾಗಿದೆ. ಆದ್ದರಿಂದ ಓದಿನ ಕಡೆ ಹೆಚ್ಚಿನ ಗಮನ ಹರಿಸುವಂತಾಗಬೇಕು.

ಪರೀಕ್ಷೆ ಬರೆಯಲು ಸಮಯ ಸಾಕಾಗುವುದಿಲ್ಲ ಎಂಬ ದೃಷ್ಟಿಯಿಂದ ಈ ಬಾರಿ ಪರೀಕ್ಷಾ ಸಮಯವನ್ನು ಅರ್ಧ ಗಂಟೆ ಹೆಚ್ಚಿಸಲಾಗಿದೆ. ಮುಂದಿನ ವರ್ಷದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಹತ್ತು ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಈ ರೀತಿ ಉತ್ತರ ಪತ್ರಿಕೆ ಪ್ರಕಟಿಸುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೇಗೆ ಉತ್ತರಿಸಬೇಕು ಎಂಬ ಬಗ್ಗೆ ಮಾಹಿತಿ ದೊರೆಯಲಿದೆ ಎಂದರು.

ಕಾಲೂರಿನ ವಿದ್ಯಾರ್ಥಿನಿ, ತನಗೆ ಪರೀಕ್ಷೆ ದಿನಗಳಲ್ಲಿ ಮನೆಯಿಂದ ಮಡಿಕೇರಿಗೆ ಬರಲು ಸೂಕ್ತ ಸರ್ಕಾರಿ ಬಸ್ ವ್ಯವಸ್ಥೆಯಿಲ್ಲ ಎಂದು ಹೇಳಿದರೆ, ಮತ್ತೊಬ್ಬ ವಿದ್ಯಾರ್ಥಿನಿ ಪ್ರಶ್ನೆ ಪತ್ರಿಕೆಗಳೇಕೇ ಸೋರಿಕೆಯಾಗುತ್ತದೆ ಎಂದು ಪ್ರಶ್ನಿಸಿ ಸಚಿವರ ಮೆಚ್ಚುಗೆ ಗಳಿಸಿದಳು. ಹಿಂದಿ ಪ್ರಶ್ನೆಪತ್ರಿಕೆಯನ್ನು ಮತ್ತಷ್ಟು ಸರಳಗೊಳಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗಿ ಎಂದು ಕೋರಿದರು. ಸಂವಾದ ಸಂದರ್ಭ ಅನೇಕ ಕಥೆ, ಹಾಸ್ಯ ಚಟಾಕಿಗಳನ್ನೂ ಸಚಿವ ಸುರೇಶ್ ಕುಮಾರ್ ಹೇಳಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು.

ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಶತ್ರುವಲ್ಲ. ಬದಲಾಗಿ ಭಯವೇ ಮೊದಲ ಶತ್ರುವಾಗಿದೆ. ಆದ್ದರಿಂದ ಭಯಕ್ಕೆ ಗುಡ್ ಬೈ ಹೇಳಬೇಕು. ವರ್ಷಪೂರ್ತಿ ಆಯಾಯ ದಿನದ ಪಾಠವನ್ನು ಅಂದೇ ಅಧ್ಯಯನ ಮಾಡಿದ್ದಲ್ಲಿ ಭಯ ಬೀಳುವ ಅಗತ್ಯವಿಲ್ಲ ಎಂದರು.

ಸಂವಾದದ ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಪಾಂಡು ಹಾಜರಿದ್ದರು.