ಮಡಿಕೇರಿ, ಫೆ. 29: ವಿಶ್ವವನ್ನೇ ಒಂದು ಸುಂದರ ದೇವಾಲಯವೆಂದು ಅರಿತು ಸರ್ವರನ್ನೂ ಪ್ರೀತಿಸುವ ಭಾರತ ದೇಶದೊಳಗೆ; ವಿಭಿನ್ನ ವಿಚಾರಗಳಿಗಾಗಿ ಪರಸ್ಪರ ದ್ವೇಷಿಸುವ ಮಾನಸಿಕತೆ ಸಲ್ಲದು ಎಂದು ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು. ನಗರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವಿವಿ ಕಾಲೇಜಿನಲ್ಲಿ; ಇತಿಹಾಸ ವಿಭಾಗ ಮತ್ತು ಮಾನುಷ ಐಕ್ಯೂಎಸಿ ಸಹಯೋಗದಿಂದ ನಾಣ್ಯ, ನೋಟು ಹಾಗೂ ಮಡಿಕೇರಿ, ಫೆ. 29: ವಿಶ್ವವನ್ನೇ ಒಂದು ಸುಂದರ ದೇವಾಲಯವೆಂದು ಅರಿತು ಸರ್ವರನ್ನೂ ಪ್ರೀತಿಸುವ ಭಾರತ ದೇಶದೊಳಗೆ; ವಿಭಿನ್ನ ವಿಚಾರಗಳಿಗಾಗಿ ಪರಸ್ಪರ ದ್ವೇಷಿಸುವ ಮಾನಸಿಕತೆ ಸಲ್ಲದು ಎಂದು ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು. ನಗರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವಿವಿ ಕಾಲೇಜಿನಲ್ಲಿ; ಇತಿಹಾಸ ವಿಭಾಗ ಮತ್ತು ಮಾನುಷ ಐಕ್ಯೂಎಸಿ ಸಹಯೋಗದಿಂದ ನಾಣ್ಯ, ನೋಟು ಹಾಗೂ (ಮೊದಲ ಪುಟದಿಂದ) ನಡೆಸುವದು; ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆ ಎಂದು ನೆನಪಿಸಿದರು.ದೇಶದ ಸಂಸ್ಕøತಿ ಮತ್ತು ಪರಂಪರೆ ಪರಸ್ಪರ ಪೂರಕವಿದ್ದು; ರಾಮಾಯಣ, ಮಹಾಭಾರತ ಕಾಲಘಟ್ಟದಿಂದ ಇತ್ತೀಚಿನ ರಾಜ ಪರಂಪರೆಯ ಆಳ್ವಿಕೆಯಲ್ಲಿಯೂ ಯುದ್ಧೋನ್ಮಾದಗಳನ್ನು ಕಂಡಿದ್ದು; ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಂಶಾಡಳಿತಕ್ಕೆ ಮನ್ನಣೆ ನೀಡದೆ ಜನತೆಯ ಆಶೋತ್ತರಗಳನ್ನು ಅರಿತು ಆಳ್ವಿಕೆ ನಡೆಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ದಿಕ್ಕಿನಲ್ಲಿ ವಿದ್ಯಾರ್ಥಿ ಸಮೂಹ ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು; ದೇಶದ ಮುನ್ನೆಲೆಗೆ ಕೊಡುಗೆ ನೀಡುತ್ತಾ; ರಾಜಕೀಯ ಶುದ್ಧೀಕರಣಕ್ಕೂ ತೊಡಗಬೇಕೆಂದು ಅವರುತಿಳಿಹೇಳಿದರು.

ಬ್ರಿಟಿಷರಿಂದ ತಪ್ಪು ಸಂದೇಶ : ಭಾರತದ ಇತಿಹಾಸದ ಮೇಲೆ ಬೆಳಕು ಚೆಲ್ಲಿದ; ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಆರ್‍ಬಿಎಎನ್‍ಎಂಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ವಿ. ಅವಿನಾಶ್ ಅವರು; ಏಕ ಸಂಸ್ಕøತಿಯ ಬ್ರಿಟಿಷರು; ಭಾರತದ ಬಹು ಸಂಸ್ಕøತಿ ಬಗ್ಗೆ ಅರ್ಥೈಸಿಕೊಳ್ಳದೆ ತಪ್ಪು ಸಂದೇಶ ಹಬ್ಬಿಸಿದ್ದಾಗಿ ನೆನಪಿಸಿದರು. ಕೊಡಗಿನ ಆಳ್ವಿಕೆಯಲ್ಲೂ ಇಲ್ಲಿನ ಜನತೆ ಶಿಕ್ಷಣ ನೀಡುವಂತೆ ಬೇಡಿಕೆ ಇರಿಸಿದಾಗ; ಅದೊಂದು ರಾಷ್ಟ್ರೀಯ ಕೋರಿಕೆ ಎಂಬಂತೆ ಉಲ್ಲೇಖಿಸಿದ್ದಾಗಿ ಬೊಟ್ಟು ಮಾಡಿದರು.

ವಿಶಿಷ್ಟ ಸಂಸ್ಕøತಿಯೊಂದಿಗೆ ಕೊಡಗಿನ ದೇವರಕಾಡು, ಪ್ರಕೃತಿ ಆರಾಧನೆಯ ಜೀವನ ಕ್ರಮ ಇಂದು ಆಧುನಿಕತೆಯ ಭರಾಟೆಯಲ್ಲಿ ನಲುಗುವಂತಾಗಿದೆ ಎಂದು ವಿಷಾದಿಸಿದ ಅವರು; ಇಂದಿನ ಯುವಪೀಳಿಗೆಯ ರೀತಿ ನೀತಿಗಳು, ಉಡುಗೆ - ತೊಡುಗೆ ವಿಚಿತ್ರ ಹಾದಿಯೊಂದಿಗೆ; ಮೂಲ ಜೀವನಕ್ರಮದೆಡೆಗೆ ಕೀಳರಿಮೆ ಹೊಂದಿದಂತಿದೆ ಎಂಬದಾಗಿ ಉದಾಹರಿಸಿದರು.

ವೀರಾಜಪೇಟೆಯ ಅಜಯ್ ಎಂ. ನಾರಾಯಣರಾವ್ ಅವರು; ಹಿಂದಿನ ಕೊಡಗು ಸಾಮ್ರಾಜ್ಯ ಸೇರಿದಂತೆ ದೇಶ - ವಿದೇಶಗಳ ಹಳೆಯ ನಾಣ್ಯ, ನೋಟುಗಳ ಪ್ರದರ್ಶನ ಆಯೋಜಿಸಿ ಗಮನ ಸೆಳೆದರಲ್ಲದೆ; ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಅಜಯ್ ಸೋದರ ದೀಪಕ್‍ರಾವ್ ಚಿತ್ರಗೀತೆಯೊಂದಿಗೆ ಮೇರುನಟ ಡಾ. ರಾಜ್ ಅವರ ಸಿನಿಮಾ ಸಂಭಾಷಣೆಯಿಂದ ವಿದ್ಯಾರ್ಥಿ ಸಮೂಹವನ್ನು ರಂಜಿಸಿದರು. ಸುಂಟಿಕೊಪ್ಪ ಅಂಚೆ ಮುಖ್ಯಸ್ಥ ಶ್ರೀನಿವಾಸ್ ಅವರು, ವಿಭಿನ್ನ ಅಂಚೆಚೀಟಿಗಳನ್ನು ಪ್ರದರ್ಶಿಸಿ; ಅಂಚೆಚೀಟಿ ಪ್ರದರ್ಶನಕ್ಕೆ ತನ್ನ ಜೀವನದಲ್ಲಿ ಸ್ಫೂರ್ತಿಯಾದ ಕ್ಷಣಗಳನ್ನು ಮೆಲುಕು ಹಾಕಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಆಶಯ ನುಡಿಯೊಂದಿಗೆ; ಇತಿಹಾಸ ಪ್ರಾಧ್ಯಾಪಕ ಡಾ. ಮೇಜರ್ ಬಿ. ರಾಘವ ಅವರು ಪ್ರಾಸ್ತಾವಿಕ ನುಡಿಸಹಿತ ಸ್ವಾಗತಿಸಿದರು. ಸಹಾಯಕ ಉಪನ್ಯಾಸಕರುಗಳಾದ ಮಹದೇವಯ್ಯ, ಡಾ. ಶ್ರೀಧರ ಹೆಗಡೆ, ರಮೇಶ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಿಂದ ದೇಶಭಕ್ತಿ ಗಾಯನದೊಂದಿಗೆ; ವಿವಿಧ ಸಾಧನೆಗಾಗಿ ಪುರಸ್ಕಾರ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಕಂಪ್ಯೂಟರ್ ವಿಭಾಗದ ಡಾ. ರವಿಶಂಕರ್ ವಂದಿಸಿದರು.