ನಾಪೋಕ್ಲು, ಏ. 29: ದೆಹಲಿ ಹತ್ಯಾಕಾಂಡದ ವಿರುದ್ಧ ಎಸ್‍ಎಸ್‍ಎಫ್ ಕೊಳಕೇರಿ ಶಾಖೆಯ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು. ಜಮಾಯತ್ ಖತೀಬ ಹನೀಫ್ ರೆಹಮಾನಿ ಜಮಾಯತ್ ಅಧ್ಯಕ್ಷ ನಾಸೀರ್, ಎಸ್‍ಎಸ್‍ಎಫ್ ಕೊಳಕೇರಿ ಶಾಖೆಯ ಅಧ್ಯಕ್ಷ ಲತೀಫ್ ಎಂ.ವೈ. ಎಸ್‍ವೈಎಸ್ ಜಿಲ್ಲಾಧ್ಯಕ್ಷ ಅಬ್ದುಲ್‍ಸಖಾಫಿ, ಪ್ರಮುಖ ಯೂಸುಫ್ ಹಾಜಿ, ರಫೀಕ್, ಅಶ್ರಫ್ ಕೆ.ವೈ, ಸಾದಿಕ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.