ನಾಪೆÇೀಕ್ಲು, ಫೆ. 29: ಚೆಟ್ಟಿಮಾನಿ ಸಮೀಪದ ಕುಂದಚೇರಿ ಕಲ್ಲುತಿರಿಕೆ ಶಿವ ಪಾರ್ವತಿ ದೇವರ ಉತ್ಸವವು ಫೆ. 28ರಂದು ನಡೆದ ಶುದ್ಧ ಕಲಶದೊಂದಿಗೆ ಸಂಪನ್ನಗೊಂಡಿತು.

ಫೆ. 21 ರಂದು ಆರಂಭಗೊಂಡ ಉತ್ಸವದಲ್ಲಿ ದೀಪಾರಾಧನೆ, ಇರ್‍ಬೊಳಕ್, ದೇವರ ಬಲಿ, ಮಹಾಪೂಜೆ, ವಿಶೇಷ ಪೂಜೆಗಳು, ಅನ್ನಸಂತರ್ಪಣೆ, ಫೆ. 26 ರಂದು ಪಟ್ಟಣಿ ಹಬ್ಬ, ಫೆ. 27 ರಂದು ದೇವರ ಅವಭೃತ ಸ್ನಾನ, ನೃತ್ಯ ಬಲಿ ಹಾಗೂ ಫೆ. 28 ರಂದು ನಡೆದ ಶುದ್ಧ ಕಲಶದೊಂದಿಗೆ ಉತ್ಸವವು ಮುಕ್ತಾಯಗೊಂಡಿತು.