ಸುಂಟಿಕೊಪ್ಪ, ಫೆ. 27: ಸುಂಟಿಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ರೂ. 95 ಲಕ್ಷ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.
ಗದ್ದೆಹಳ್ಳದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ತೆರಳುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಶಾಸಕರು, ಸುಂಟಿಕೊಪ್ಪ ಕಾಲೇಜು ಕಟ್ಟಡಕ್ಕೆ ರೂ. 50 ಲಕ್ಷದಲ್ಲಿ ಚೆಟ್ಟಳ್ಳಿ ಯಂಕನ ಮನೆಗೆ ಸಂಪರ್ಕ ರಸ್ತೆಗೆ ರೂ. 5 ಲಕ್ಷ, ಚಾಮುಂಡೇಶ್ವರಿ ದೇವಸ್ಥಾನ ಸರ್ಕಾರಿ ಜೂನಿಯರ್ ಕಾಲೇಜು ರಸ್ತೆಗೆ ರೂ. 5 ಲಕ್ಷ, ಮಾರ್ಕೆಟ್ ರಸ್ತೆಗೆ ರೂ. 5 ಲಕ್ಷ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯಿಂದ ನಾಕೂರು ಸಂಪರ್ಕ ರಸ್ತೆಗೆ ರೂ. 5 ಲಕ್ಷ, ಸುಂಟಿಕೊಪ್ಪ ಟೌನ್ ಮಳೆಹಾನಿ ಅಡಿಯಲ್ಲಿ ರೂ. 10 ಲಕ್ಷ, ಸುಂಟಿಕೊಪ್ಪ ಬೈಚನ ಮನೆಗೆ ತೆರಳುವ ರಸ್ತೆಗೆ ರೂ. 5 ಲಕ್ಷಗಳಲ್ಲಿ ಕಾಮಗಾರಿಯನ್ನು ನಿರ್ವಹಿಸಲಾಗು ವುದು ಎಂದರು.
ಮುಂದಿನ ದಿನಗಳಲ್ಲಿ ರಾಜ್ಯ ಬಜೆಟ್ ಬಳಿಕ ಜಿಲ್ಲೆಗೆ ಹೆಚ್ಚಿನ ಅನುದಾನ ತರುವ ಮೂಲಕ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 1 ಕೋಟಿಗೂ ಮಿಕ್ಕಿ ಅನುದಾನದಿಂದ ಅಭಿವೃದ್ಧಿ ಕಾರ್ಯ ನಡೆಸಲಾಗುವು ದೆಂದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರುಗಳಾದ ಕೆ.ಇ. ಕರೀಂ, ನಾಗರತ್ನ ಸುರೇಶ್, ಪಟ್ಟೆಮನೆ ಗಿರಿಜಾ ಉದಯಕುಮಾರ್, ಶಿವಮ್ಮ, ಜಿ.ಜಿ. ಹೇಮಂತ್ ಕುಮಾರ್, ಪಿಡಿಓ ವೇಣುಗೋಪಾಲ್, ಪ್ರಾ.ಕೃ.ಪ.ಸ. ಸಂ. ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್, ನಾಗೇಶ್ ಪೂಜಾರಿ ಮತ್ತಿತರರು ಇದ್ದರು.