ವೀರಾಜಪೇಟೆ, ಫೆ. 27: ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್ ಮತ್ತು ಹ್ಯಾಂಡ್ ಬಾಲ್ ನಾಲ್ಕನೇ ಸೆವೆಂಥ್ ಜೋನ್ ಅಂತರ ವಿಶ್ವವಿದ್ಯಾಲಯ ಬಾಸ್ಕೆಟ್ ಬಾಲ್ ತಂಡವನ್ನು ಪ್ರತಿನಿಧಿಸಿದ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಕೆ.ಡಿ. ಅಕ್ಕಮ್ಮ, ಬಾಸ್ಕೆಟ್ ಬಾಲ್ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕಾಲೇಜಿಗೆ ಕೀರ್ತಿ ತಂದಂತಹ ಸಮ್ರಿನ್ ತಾಜ್, ಹ್ಯಾಂಡ್ ಬಾಲ್ನಲ್ಲಿ ಹರ್ಯಾಣ, ಬೆಂಗಳೂರು, ಕೇರಳ, ಮದ್ರಾಸ್ಗಳಲ್ಲಿ ಆಡಿ ಕಾಲೇಜು ಪ್ರತಿನಿಧಿಸಿದ ಟೀಯ ವರ್ಗೀಸ್, ಬಾಸ್ಕೆಟ್ ಬಾಲ್ನಲ್ಲಿ ಚೆನ್ನೈನಲ್ಲಿ ಕಾಲೇಜಿನ ಪರವಾಗಿ ಆಡಿದ ಮಾಚಯ್ಯ, ಸುಬ್ಬಯ್ಯ, ರೋಯಲ್ ಜೋಜೋ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಮುಖ್ಯ ಅಥಿತಿಗಳಾದ ಪೆÇನ್ನಂಪೇಟೆ ಸಾಯಿ ಶಂಕರ್ ಕಾಲೇಜು ಪ್ರಾಂಶುಪಾಲರಾದ ದಶಮಿ, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ರೋನಿ ರವಿಕುಮಾರ್ ಸಹಾಯಕ ಧರ್ಮಗುರುಗಳಾದ ರೆ. ಫಾ. ರೋಷನ್ ಬಾಬು ಇದ್ದರು.