ಸುಂಟಿಕೊಪ್ಪ, ಫೆ. 27: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ವಿವಿಧೆಡೆ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.
ಕಾಜೂರುನಿಂದ ಆರ್. ವಿಜಯ ಅವರ ಮನೆ ಕಡೆ ರಸ್ತೆಗೆ ರೂ. 5 ಲಕ್ಷ, ಐಗೂರು ಮುಖ್ಯ ರಸ್ತೆಯಿಂದ ಕಿಬ್ರಿ ಪೈಸಾರಿ ರಸ್ತೆಗೆ ರೂ. 5 ಲಕ್ಷ, 2ನೇ ಐಗೂರು ಮುಖ್ಯ ರಸ್ತೆಯಿಂದ ಅಚ್ಚಯ್ಯ ಅವರ ಮನೆಗೆ ತೆರಳುವ ರಸ್ತೆಗೆ ರೂ. 5 ಲಕ್ಷ, ಯಡವಾರೆ ಮುಖ್ಯ ರಸ್ತೆಯಿಂದ ಕಂತ್ತಳ್ಳಿಗೆ ಹೋಗುವ ರಸ್ತೆ ಡಾಮರೀಕರಣಕ್ಕೆ ರೂ. 5 ಲಕ್ಷ, ಹೊಸತೋಟ ಮುಖ್ಯ ರಸ್ತೆಯಿಂದ ಕಿಬ್ರಿ ಪೈಸಾರಿಗೆ ತೆರಳುವ ರಸ್ತೆ ಡಾಮರೀಕರಣಕ್ಕೆ ರೂ. 5 ಲಕ್ಷ, ಯಡವನಾಡು ಉಡುವೇರ ಮುತ್ತಪ್ಪ ಅವರ ಮನೆಯಿಂದ ಯು.ಪಿ. ರಾಜು ಅವರ ಮನೆ ಕಾಂಕ್ರಿಟ್ ರಸ್ತೆಗೆ ರೂ. 5 ಲಕ್ಷ, ಐಗೂರು ಜಾತಳ್ಳಿ ರಸ್ತೆ ಹಾಗೂ 2ನೇ ಐಗೂರು ಮುಖ್ಯ ರಸ್ತೆಯಿಂದ ಅಚ್ಚಯ್ಯ ಅವರ ಮನೆ ಕಡೆ ಮಳೆಯಿಂದ ಹಾನಿಯಾದ ರಸ್ತೆಗೆ ರೂ. 8 ಲಕ್ಷ, ಕಾಜೂರು ದುರ್ಗಾಪರಮೇಶ್ವರಿ ಎಸ್ಟೇಟ್ ಕಡೆ ರಸ್ತೆಗೆ ರೂ. 9 ಲಕ್ಷ, ಕಾಜೂರು ಬಾಬು ಅವರ ಮನೆ ಕಡೆ ಹೋಗುವ ರಸ್ತೆ ಕುಸಿದಿರುವ ಭಾಗಕ್ಕೆ ತಡೆಗೋಡೆ ರೂ. 8 ಲಕ್ಷ ಮೀಸಲಿಡಲಾಗಿದೆ. ಒಟ್ಟು ರೂ. 55 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಶಾಸಕರೊಂದಿಗೆ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ಸಬಿತಾ ಚೆನ್ನಕೇಶವ, ಬಿಜೆಪಿ ಸ್ಥಾನೀಯ ಸಮಿತಿ ಬಾರನ ಪ್ರಮೋದ್, ಐಗೂರು ಗ್ರಾ.ಪಂ. ಅಧ್ಯಕ್ಷ ರಮೇಶ, ಕಾರ್ಯದರ್ಶಿ ಲಿಂಗರಾಜು, ಟಿ.ಕೆ. ಭಾಸ್ಕರ, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಉಪಸ್ಥಿತರಿದ್ದರು.