ಮಡಿಕೇರಿ, ಫೆ. 26: ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮಾತಂಡ ಸಿ. ಪೂವಯ್ಯ, ಉಪಾಧ್ಯಕ್ಷರಾಗಿ ಕಾಂಗೀರ ಎಂ. ಅರ್ಜುನ ಅವರುಗಳು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

ನಿರ್ದೇಶಕರುಗಳಾಗಿ ಕೂತಂಡ ಕೆ. ಅಪ್ಪಯ್ಯ, ಚರಮಂಡÀ ಎಸ್. ಪೂವಯ್ಯ, ಚೋಳಂಡ ಎಂ. ಕಾವೇರಪ್ಪ, ಕುಡುವಂಡ ಬಿ. ಉತ್ತಪ್ಪ, ಕಾಮಯಂಡ ಜಿ. ಅಚ್ಚಯ್ಯ, ಇಗ್ಗುಡ ಎಂ. ಮೊಣ್ಣಪ್ಪ, ಮಾತಂಡ ಪಿ. ಪೂವಯ್ಯ, ಚೊಟ್ಟೇರ ಎ. ಶೀಲಾವತಿ, ಬೇಡರ ಎನ್. ಲಕ್ಷ್ಮಿದೇವಿ, ಕೂತಂಡ ಟಿ. ಚಿತ್ರ, ಹೆಚ್. ಚೋಂದು ನೇಮಕಗೊಂಡಿದ್ದಾರೆ.