*ಗೋಣಿಕೊಪ್ಪ, ಫೆ. 26: ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಹೆಸರಿನಲ್ಲಿ 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ರೈತ ಕುಟುಂಬಕ್ಕೆ ವರ್ಷಕ್ಕೆ ರೂ. 6 ಸಾವಿರ ಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದು, ಈ ಯೋಜನೆಯ ಲಾಭವನ್ನು ಇನ್ನು ಮುಂದೆ ಎಲ್ಲಾ ರೈತರು ಪಡೆಯಬಹುದಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದ್ದಾರೆ.

ಪೆÇನ್ನಂಪೇಟೆ ಶಾಸಕರ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಯಲ್ಲಿ ತಿದ್ದುಪಡಿ ತಂದಿದ್ದು, ಪ್ರತಿ ರೈತರಿಗೆ ಅನುಕೂಲ ಸಿಗಬೇಕೆಂದು ಬಯಸಿದೆ. ಇದರ ಅನುಕೂಲವನ್ನು ರೈತರು ಪಡೆದುಕೊಳ್ಳಲು ತಮ್ಮ ಹೆಸರು ನೋಂದಣಿ ಮಾಡುವಂತೆ ತಿಳಿಸಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸರ್ಕಾರ ನೀಡಿದ್ದು, ಅದರಂತೆ ಶೀಘ್ರದಲ್ಲೇ ಕಾಮಗಾರಿಗಳು ನಡೆಯಲಿದೆ ಎಂದು ಹೇಳಿದರು. ಮಳೆಹಾನಿ ಪರಿಹಾರದಲ್ಲಿ ಹೆಚ್ಚಿನ ಅನುದಾನ ಬಂದಿದ್ದು, ಮಾರ್ಚ್ ಅಂತ್ಯದೊಳಗೆ ಅನುದಾನ ಸದ್ಬಳಕೆಯಾಗಬೇಕು ಮತ್ತು ಕಾಮಗಾರಿ ಶೀಘ್ರವಾಗಿ ಮುಗಿಸಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಇಂಜನಿಯರುಗಳು ಈ ಬಗ್ಗೆ ಜಾಗೃತರಾಗಬೇಕು. ಅನುದಾನ ಸದ್ಬಳಕೆಯಾಗದೆ ವಿಫಲವಾದರೆ ಇದರ ಸಂಪೂರ್ಣ ಹೊಣೆ ಜಿಲ್ಲಾಡಳಿತ ಹಾಗೂ ಇಂಜಿನಿಯರುಗಳು ಎದುರಿಸಬೇಕಾಗುತ್ತದೆ. ಇಂತಹವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಸಿದ್ದಾರೆ.

ತಿತಿಮತಿ, ಹುಣಸೂರು ರಸ್ತೆಯ ಮರು ಡಾಂಬರೀಕರಣಕ್ಕೆ ರೂ. 6 ಕೋಟಿ 40 ಲಕ್ಷದಲ್ಲಿ ಅನುದಾನ ಬಿಡುಗಡೆಯಾಗಿದೆ. ಗೋಣಿಕೊಪ್ಪಲು ವಿನ ಆರ್.ಎಂ.ಸಿ. ಸಮೀಪದಿಂದ ತಿತಿಮತಿ-ಬಾಳುಮನಿ ಸೇತುವೆ ಯವರೆಗೆ ರಸ್ತೆ ಡಾಂಬರೀಕರಣ ರೂ. 5 ಕೋಟಿ ವೆಚ್ಚದಲ್ಲಿ ನಡೆಯಲಿದೆ. ಬಾಳುಮನಿ ಸೇತುವೆಯಿಂದ ಆನೆಚೌಕೂರು ಗೇಟಿನವರೆಗೆ ರೂ. 1 ಕೋಟಿ 40 ಲಕ್ಷದಲ್ಲಿ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಬಾಳೆಲೆ ಕಾನೂರು ಮುಖ್ಯ ರಸ್ತೆಗೆ ರೂ. 3 ಕೋಟಿ, ಪೆÇನ್ನಂಪೇಟೆ, ಪೆÇನ್ನಪ್ಪಸಂತೆ ಮುಖ್ಯ ರಸ್ತೆಗೆ ರೂ. 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಅಲ್ಲದೇ ಬೇಸಿಗೆಯ ನೀರಿನ ಅಭಾವವನ್ನು ನೀಗಿಸಲು ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಬಿಜೆಪಿ ವರ್ತಕರ ಪ್ರಕೋಷ್ಟ ಜಿಲ್ಲಾಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪೆÇನ್ನಂಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಲಾಲ ಭೀಮಯ್ಯ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ, ತಾಲೂಕು ನಿಕಟಪೂರ್ವ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಪಂದ್ಯಂಡ ಹರೀಶ್ ಸೇರಿದಂತೆ ಹಲವರು ಹಾಜರಿದ್ದರು.

- ಎನ್.ಎನ್. ದಿನೇಶ್