ಸುಂಟಿಕೊಪ್ಪ, ಫೆ. 26: ದೇಯಿ ಬೈದೈತಿ, ಕೋಟಿ-ಚೆನ್ನಯ್ಯ ಮೂಲ ಸ್ಥಾನವಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಒಡಗನ್ನೂರು ಗ್ರಾಮದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತೆಲ್‍ನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸುಂಟಿಕೊಪ್ಪದ ರಾಮ ಮಂದಿರದಿಂದ ಹೊರೆಕಾಣಿಕೆ ಹೊತ್ತ ವಾಹನಗಳು ಸಾಗಿದವು.
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಬಿಲ್ಲವ ಸಮೂದಾಯ ದವರು ತಮಗೆ ಕೈಲಾದಷ್ಟು ಮಟ್ಟಿನ ಅಕ್ಕಿ, ಬೆಲ್ಲ, ಸಕ್ಕರೆ, ತರಕಾರಿ, ಬಾಳೆಕಾಯಿ, ಎಣ್ಣೆ ಇನ್ನಿತರ ವಸ್ತುಗಳನ್ನು ಇಲ್ಲಿನ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಮುಖಾಂತರ ಹೊರೆ ಕಾಣಿಕೆಯನ್ನು ಸಮರ್ಪಿಸಿ ಕಳುಹಿಸಿಕೊಟ್ಟರು.
ಇಲ್ಲಿನ ಕೋದಂಡರಾಮ ದೇವಾಲಯದಲ್ಲಿ ದರ್ಶನ್ ಭಟ್ ಅವರು ವಾಹನಗಳಿಗೆ ಪೂಜೆ ನೆರವೇರಿಸಿದ ನಂತರ ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ. ಮಣಿ ಮುಖೇಶ್ ಅವರು ತೆಂಗಿನ ಕಾಯಿ ಒಡೆಯುವು ದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ದೇಯಿ ಬೈದೈತಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ, ಕೊಡಗರಹಳ್ಳಿ ಗ್ರಾಮ ವೇದಿಕೆಯ ಅಧ್ಯಕ್ಷ ಶೀನಪ್ಪ, ಬಿಲ್ಲವ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಆದಿತ್ಯ, ಸಂಘದ ಪದಾಧಿಕಾರಿಗಳಾದ ಸತೀಶ್ ಪೂಜಾರಿ, ಬಾಲಕೃಷ್ಣ ಪೂಜಾರಿ, ಗೀತಾ ವಿಶ್ವನಾಥ್, ಲೋಕೇಶ್, ವೆಂಕಪ್ಪ ಕೋಟ್ಯಾನ್, ಬಿ.ಐ.ಭವಾನಿ, ನಾಗಮ್ಮ, ಮಿಲನ್, ಅಶೋಕ್, ಪದ್ಮನಾಭ, ಶಶಿಕಲಾ ಇತರರು ಇದ್ದರು.