ಮಡಿಕೇರಿ, ಫೆ. 26: ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಹೊರಾಂಗಣ ಸುತ್ತು ಪ್ರದಕ್ಷಿಣೆ ಪಥಕ್ಕೆ ಅಳವಡಿಸಿರುವ ಮೇಲ್ಚಾವಣಿ ಸೀಟುಗಳನ್ನು ತೆರವುಗೊಳಿಸಿ, ಸಿಮೆಂಟ್ ಹೆಂಚುಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಈ ದೇವಾಲಯದಲ್ಲಿ ಮಾರ್ಚ್ 19 ರಿಂದ 25ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಸಂಬಂಧ ಕಾಮಗಾರಿಗಳಿಗೆ ಚಾಲನೆ ಲಭಿಸಿದೆ. ದೇವಾಲಯದ ವ್ಯವಸ್ಥಾಪನ ಸಮಿತಿ ಉಸ್ತುವಾರಿಯಲ್ಲಿ ಕೊಡಗು ನಿರ್ಮಿತಿ ಕೇಂದ್ರದಿಂದ ರೂ. 11ಲಕ್ಷ ವೆಚ್ಚದಲ್ಲಿ ಈ ಕೆಲಸ ಕೈಗೊಳ್ಳಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ‘ಶಕ್ತಿ’ ಯೊಂದಿಗೆ ಖಚಿತಪಡಿಸಿದ್ದಾರೆ.