*ಸಿದ್ದಾಪುರ, ಫೆ. 26: ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೆರವೇರಿಸಿದರು.ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ವಾಲ್ನೂರು, ಕೂಡ್ಲೂರು, ಚೆಟ್ಟಳ್ಳಿ ರಸ್ತೆ, ವಾಲ್ನೂರು ಬಸವೇಶ್ವರ ದೇವಾಯ ರಸ್ತೆ, ಅಭ್ಯತ್ ಮಂಗಲ ಜೆಪಿ ನಗರದ ರಸ್ತೆಯಿಂದ ಹಿಂದೂ ರುದ್ರಭೂಮಿ ರಸ್ತೆ, ಜ್ಯೋತಿನಗರ ರಸ್ತೆ ಹಾಗೂ ಕೃಷ್ಣಪುರದ ಮುಖ್ಯ ರಸ್ತೆಯಿಂದ ಅಡ್ಡರಸ್ತೆ ಡಾಂಬರೀಕರಣಗೊಳ್ಳಲಿದೆ.

ಜ್ಯೋತಿನಗರದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

ಗಾ.ಪಂ. ಉಪಾಧ್ಯಕ್ಷ ಸತೀಶ್, ಸದಸ್ಯರುಗಳಾದ ಅಂಚೆಮನೆ ಸುಧಿ, ನಳಿನಿ, ಜಮೀಲ, ಇಂಜಿನಿಯರ್ ಫಯಾಜ್ó ಅಹಮ್ಮದ್, ಬಿಜೆಪಿಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮನುರೈ, ಸ್ಥಾನೀಯ ಸಮಿತಿ ಅಧ್ಯಕ್ಷ ವೆಂಕಟೇಶ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.