ಮಡಿಕೇರಿ, ಫೆ. 26: ಮಡಿಕೇರಿ ನಗರ ಇಂದಿರಾನಗರ ಬಡಾವಣೆಯ ಶ್ರೀಜ್ಯೋತಿ ಯುವಕ ಸಂಘದ 29ನೇ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಪೂಜೋತ್ಸವ ಜರುಗಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಚಿತ್ರಾವತಿ ಕಾರ್ಯಕ್ರಮ ಉದ್ಘಾಟಿಸಿದರು. ದಿನದ ಅಂಗವಾಗಿ ಛದ್ಮವೇಷ, ಭಾವಗೀತೆ, ಆಶುಭಾಷಣ, ಜನಪದ ಗೀತೆ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭವನ್ನು ರಾಜ್ಯ ಯುವ ಪ್ರಶಸ್ತಿ ವಿಜೇತ ಗಿರೀಶ್ ತಾಳತ್ತಮನೆ ಉದ್ಘಾಟಿಸಿ ಮಾತನಾಡಿ, ಸಂಘಟನೆಯ ಬಲ ಮತ್ತು ಒಗ್ಗಟ್ಟನ್ನು ಶ್ಲಾಘಿಸಿದರು. ಸಂಘದ ಅಧ್ಯಕ್ಷ ಬಿ.ಡಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಪ್ರಮುಖರಾದ ಜುಲೇಕಾಬಿ, ಹೆಚ್.ಟಿ. ಲಕ್ಷ್ಮಣ್, ಎ.ಎಂ. ಕ್ರಿಸ್ಟೋಫರ್, ಎಂ.ಎಂ. ಮಹಮ್ಮದ್ ಆಲಿ ಹಾಗೂ ಸಂಘದ ಮಾಜಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.
ಸಂಘದ ಕಾರ್ಯದರ್ಶಿ ಗಣೇಶ್ ಕಾರ್ಯಕ್ರಮನ್ನು ನಿರೂಪಿಸಿ, ಮಾಜಿ ಅಧ್ಯಕ್ಷ ಜಯಕುಮಾರ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಶಿವಪ್ಪ ವಂದಿಸಿದರು. ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು.