ಮಡಿಕೇರಿ, ಜ. 26: ಎಮ್ಮೆಮಾಡು ಗ್ರಾಮದಲ್ಲಿರುವ ಎಸ್‍ಎಸ್‍ವಿ ಆಂಗ್ಲ ಮಾದ್ಯಮ ಶಾಲೆ ಎಮ್ಮೆಮಾಡು ಇವರು ಸರ್ಕಾರದ/ ಇಲಾಖೆಯ ನಿಯಮಾವಳಿಗಳ ಪ್ರಕಾರ ದಾಖಲಾದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ವಿಫಲರಾಗಿರುವುದರಿಂದ ವಿದ್ಯಾಸಂಸ್ಥೆಯ ಮಾನ್ಯತೆಯನ್ನು 2020-21 ನೇ ಸಾಲಿನಿಂದ ರದ್ದುಪಡಿಸಿದೆ.

2020-21ನೇ ಸಾಲಿನಿಂದ ಈ ವಿದ್ಯಾಸಂಸ್ಥೆ ಅವರು ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬಾರದು ಹಾಗೂ ಪೋಷಕರು ಎಸ್‍ಎಸ್‍ವಿ ವಿದ್ಯಾ ಸಂಸ್ಥೆಗೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಬಾರದು. ಮುಂದುವರಿದು, ಈ ವಿದ್ಯಾ ಸಂಸ್ಥೆಗೆ ಪೋಷಕರು ವಿದ್ಯಾರ್ಥಿಗಳನ್ನು ದಾಖಲಿಸಿದಲ್ಲಿ ಮತ್ತು ವಿದ್ಯಾಸಂಸ್ಥೆ ಅವರು ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಲ್ಲಿ ಮುಂದಿನ ಆಗು ಹೋಗುಗಳಿಗೆ ಸಂಬಂಧಿಸಿದವರೇ ನೇರ ಜವಾಬ್ದಾರರಾಗುತ್ತಾರೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ತಿಳಿಸಿದ್ದಾರೆ.