ಮಡಿಕೇರಿ, ಫೆ. 27: ಮಕ್ಕೋಟುಕೇರಿ ಕೈಕಾಡು ಗ್ರಾಮದ ಮಕ್ಕೋಟು ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ಪೂರ್ಣಗೊಂಡಿದ್ದು ಪುನರ್ ಪ್ರತಿಷ್ಠಾಪನಾ ಮಹೋತ್ಸವ ವನ್ನು ಮಾರ್ಚ್ 4-5 ರಂದು ತಂತ್ರಿಗಳಾದ ಶ್ರೀ ಪ್ರಥ್ವಿ ಭಟ್‍ರವರ ನೇತೃತ್ವದಲ್ಲಿ ನಡೆಸಲು ನಿಶ್ಚಯಿಸಲಾಗಿದೆ.
ಮಾ. 4 ರಂದು ಸಂಜೆ 7 ಗಂಟೆಗೆ ವಾಸ್ತು ರಕ್ಷೋಘ್ನ ಹೋಮ. ಮಾ. 5 ರಂದು ಬೆಳಿಗ್ಗೆ 8 ಗಂಟೆಗೆ ಅಷ್ಟದಿಕ್ಪಾಲಕರ ಸತ್ವಮಾಂತ್ರಿಕ ಹೋಮ, ಬೆಳಿಗ್ಗೆ 11 ಗಂಟೆಗೆ ಪ್ರತಿಷ್ಠಾಪನೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸರ್ಕಾರದಿಂದ ಧನ ಸಹಾಯ ಮಾಡಿಸಿದ ಕದ್ದಣಿಯಂಡ ಹರೀಶ್ ಬೋಪಣ್ಣ ಹಾಗೂ ಈ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯ ಗುತ್ತಿಗೆ ಪಡೆದು ನಿರ್ವಹಿಸಿದ ಹಾಗೂ ಉಚಿತವಾಗಿ ದೇವಾಲಯದ ಒಳಾಂಗಣಕ್ಕೆ ಗ್ರಾನೈಟ್‍ಕಲ್ಲು ಹಾಕಿಕೊಟ್ಟು, ದೇವಾಲಯಕ್ಕೆ ಸುಣ್ಣಬಣ್ಣ ಮಾಡಿಸಿಕೊಟ್ಟ ಮೂರ್ನಾಡು ನಿವಾಸಿಗಳಾದ ಸುರೇಶ್ ಮುತ್ತಪ್ಪ ಅವರುಗಳನ್ನು ಸನ್ಮಾನಿಸಲಾಗುವುದು.