ಮಡಿಕೇರಿ, ಫೆ. 27: ಪಿ.ಯು.ಸಿ. ಹಾಗೂ ಪದವಿ ವ್ಯಾಸಂಗ ಮುಗಿಸಿರುವ ಪದವಿಧರರಿಗೆ ಎಫ್.ಡಿ.ಎ. ಹಾಗೂ ಕೆ.ಪಿ.ಎಸ್.ಸಿ. ಪರೀಕ್ಷೆಗಳು ಪ್ರಕಟಗೊಂಡಿವೆ. ಪರೀಕ್ಷೆಗಳನ್ನು ತೆಗೆದುಕೊಂಡಿರುವ ಪರೀಕ್ಷಾರ್ಥಿಗಳು ಪರೀಕ್ಷೆಗೆ ಹೇಗೆ ಸನ್ನದ್ದರಾಗ ಬೇಕು ಎಂಬದರ ಬಗ್ಗೆ ಒಂದು ದಿನದ ಜಿಲ್ಲಾ ಮಟ್ಟದ ಉಚಿತ ಕಾರ್ಯಾಗಾರವನ್ನು ಅನ್ವಿತ್ ಕೋಚಿಂಗ್ ಸೆಂಟರ್ ವತಿಯಿಂದ ಮಾರ್ಚ್ 1 ರಂದು ಬೆಳಿಗ್ಗೆ 10 ಗಂಟೆಗೆ ಬಸಪ್ಪÀ ಶಿಶುವಿಹಾರ ದಾಸವಾಳ ರಸ್ತೆ ಮಡಿಕೇರಿಯಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9844958316, 9606753142 ಸಂಪರ್ಕಿಸಬಹುದಾಗಿದೆ.