ನಾಪೆÇೀಕ್ಲು, ಫೆ. 26: ಬೇಡಿಕೆಗಳು ಬೇಕಾದಷ್ಟಿರುತ್ತದೆ. ಅದರಲ್ಲಿ ಗ್ರಾಮೀಣ ಪ್ರದೇಶದ ಬೇಡಿಕೆಗಳಿಗೆ ಹೆಚ್ಚಿನ ಸ್ಪಂದನ ನೀಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು.
ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದ ಮುಕ್ಕಾಟಿರ ಕುಟುಂಬಸ್ಥರ ಐನ್ಮನೆಗೆ ತೆರಳುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆ ಸೇರಿದಂತೆ 34 ಎಂ.ಎಲ್.ಎ.ಗಳ ಕ್ಷೇತ್ರಕ್ಕೆ ನಾನು ಅನುದಾನ ನೀಡಬೇಕು. ಇಲ್ಲಿನ ಜನರ ಬೇಡಿಕೆ ಪೂರೈಸಲು ಹೆಚ್ಚಿನ ಆದ್ಯತೆ ನೀಡುತ್ತೇನೆ. ಈ ರಸ್ತೆ ಕಾಮಗಾರಿಯ ಬಗ್ಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ಹೆಚ್ಚಿನ ಒತ್ತಡ ನೀಡಿದ್ದರು. ಇಲ್ಲಿಗೆ ರೂ. 5 ಲಕ್ಷ ಅನುದಾನ ನೀಡಿದ್ದೇನೆ ಎಂದರು. ಗ್ರಾಮೀಣ ಪ್ರದೇಶದ ಜನರ ಕಷ್ಟ ತಿಳಿದಿದೆ. ಜನರಿಗೆ ರಸ್ತೆ, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮದ ಜನರೇ ಕಾಮಗಾರಿ ಕಳಪೆಯಾಗದಂತೆ ಕಾಳಜಿ ವಹಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಸದಸ್ಯ ಮಾಚೆಟ್ಟಿರ ಕುಶು ಕುಶಾಲಪ್ಪ, ಚೋಕಿರ ರೋಶನ್, ಬಿದ್ದಾಟಂಡ ಎಸ್. ತಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬ, ಗ್ರಾಮಸ್ಥರಾದ ಮುಕ್ಕಾಟಿರ ಅಣ್ಣಯ್ಯ, ಚಂದ್ರಶೇಖರ್, ಲಿಂಗಪ್ಪ, ಹರೀಶ್, ಜಗದೀಶ್, ಸುರೇಶ್, ತಿಮ್ಮಯ್ಯ, ಶಿವರಾಮ, ಸಾವಿತ್ರಿ, ಬೊಳ್ಳೆಪಂಡ ಹರೀಶ್, ಕಲಿಯಂಡ ಕೌಶಿಕ್, ಜಯ ಮತ್ತಿತರರು ಇದ್ದರು.