ಭಾಗಮಂಡಲ, ಫೆ. 25 : ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ತಮ್ಮದಾಗಿಸಿಕೊಂಡರು. ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಹೊಸೂರು ಜೆ. ಸತೀಶ್ ಕುಮಾರ್ ಆಯ್ಕೆಯಾಗಿದ್ದು; ಉಪಾಧ್ಯಕ್ಷರಾಗಿ ಜೆ.ಎಸ್. ನಂಜುಂಡಪ್ಪ ಆಯ್ಕೆಯಾಗಿದ್ದಾರೆ.