ಮಡಿಕೇರಿ, ಫೆ. 25: ಇತ್ತೀಚೆಗೆ ಕೇಂದ್ರ ಸರಕಾರದಿಂದ ಬಜೆಟ್ ಮಂಡನೆ ವೇಳೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿರುವಂತೆ , ದೇಶದ ಸಹಕಾರಿ ಬ್ಯಾಂಕ್ಗಳನ್ನು ಆಡಳಿತಾ ತ್ಮಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ವ್ಯಾಪ್ತಿಗೆ ಒಳಪಡಿಸುವ ಸಂಬಂಧ, ಇದುವರೆಗೆ ಯಾವುದೇ ಆದೇಶ ಬಂದಿಲ್ಲವೆಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಬಾಂಡ್ ಗಣಪತಿ ಪ್ರತಿಕ್ರಿಯಿಸಿದ್ದಾರೆ.ಈ ಕುರಿತು ‘ಶಕ್ತಿ' ಯೊಂದಿಗೆ ಮಾತನಾಡಿದ ಅವರು , ಮುಂಗಡ ಪತ್ರ ಮಂಡನೆ ಸಂದರ್ಭವಷ್ಟೆ ವಿಷಯ ಪ್ರಸ್ತ್ತಾಪಿಸಲಾಗಿದ್ದು, ಬಳಿಕ ಸರಕಾರದಿಂದ ಯಾವುದೇ ಆದೇಶ ಪತ್ರ ನಮ್ಮ ಬ್ಯಾಂಕ್ಗೆ ಬಂದಿಲ್ಲವೆಂದು ವಿವರಣೆ ನೀಡಿದರು ವಿ.ಎಸ್.ಎಸ್.ಎನ್ ಗಳಿಗೆ ಅನ್ವಯಿಸುವುದಿಲ್ಲ: ಕೊಡಗು ಜಿಲ್ಲೆಯಲ್ಲಿ ಅನೇಕ ವ್ಯವಸಾಯ ಸೇವಾ ಸಹಕಾರ ಸಂಘಗಳು, ಒಂದೊಮ್ಮೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ಗಳಾಗಿ ಹೆಸರು ಬದಲಾಯಿಸಿಕೊಂಡಿದ್ದನ್ನು ನೆನಪಿಸಿದ ಅವರು , ಈ ವಿಷಯ ವಾಗಿ ಸರಕಾರದಿಂದ ರಚನೆಗೊಂಡಿದ್ದ ವೈದ್ಯನಾಥನ್ ವರದಿಯಲ್ಲಿ ಅಂತಹ ಪ್ರಸ್ತಾಪಕ್ಕೆ ಮಾನ್ಯತೆ ಲಭಿಸಿಲ್ಲವೆಂದು ಬೊಟ್ಟು ಮಾಡಿದರು.ವಿಎಸ್ಎಸ್ಎನ್ಗಳಲ್ಲಿ ಗೊಬ್ಬರ ಇನ್ನಿತರ ಕೃಷಿ ಉಪಕರಣ ಮಾರಾಟಗೊಳ್ಳುವುದರಿಂದ; ಬ್ಯಾಂಕ್ ಎಂದು ಪರಿಗಣಿಸಲು ಸಾಧ್ಯವಾಗದು ಎಂದು ವರದಿಯಲ್ಲಿ ಉಲ್ಲೇಖಿಸಿದ ಮೇರೆಗೆ, ಇಂಥ ಸಹಕಾರ ಸಂಸ್ಥೆಗಳನ್ನು ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ ಎಂದು ಮರು ನಾಮಕರಣಗೊಳಿಸಿದ್ದಾಗಿ ಗಣಪತಿ ಸ್ಪಷ್ಟಪಡಿಸಿದರು.ಜಿಲ್ಲಾ ಬ್ಯಾಂಕ್ ದಾಖಲೆ ಸಿದ್ಧ: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಥಮವಾಗಿ 1921 ರಲ್ಲಿ 16 ಮಂದಿ ಬಿಡು ಸದಸ್ಸರೊಂದಿಗೆ ರೂ. 4400 ಮೊತ್ತದ ಪಾಲು ಬಂಡವಾಳದಿಂದ ಆರಂಭಗೊಂಡು ಸ್ಥಾಪಕ ಅಧ್ಯಕ್ಷರಾಗಿ ಕೊಡಂದೇರ ರಾವ್ ಬಹದ್ದೂರ್ ಕೆ. ಕುಟ್ಟಯ್ಯ ಅಧ್ಯಕ್ಷರಾಗಿದ್ದರು. ಇಂದು ಬ್ಯಾಂಕ್ ಶತಮಾನೋತ್ಸವ ಆಚರಿಸುವ ಕಾಲ ಘಟ್ಟದಲ್ಲಿ ಅದೇ ಕುಟುಂಬದಿಂದ ಅಧ್ಯಕ್ಷನಾಗುವ ಯೋಗ ತನಗೆ ಲಭಿಸಿದ್ದಾಗಿ ಸ್ಮರಿಸಿಕೊಂಡರಲ್ಲದೆ, ಈಗಷ್ಟೇ ತನ್ನ ಅವಧಿಯಲ್ಲಿ ಕೇಂದ್ರ ಬ್ಯಾಂಕಿನ ಭೂದಾಖಲೆ ಸಹಿತ ಆಕಾರ ಬಂಧಿ ಸಿದ್ದಗೊಳಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದುವರೆಗೆ ಕೊಡಗು ಪ್ರಾಂತೀಯ ಸಹಕಾರ ಬ್ಯಾಂಕ್ ಹೆಸರಿನಲ್ಲಿ ಇದ್ದ ದಾಖಲೆಗಳನ್ನು ಸರಿಪಡಿಸಿದ್ದು,1948 ರಿಂದ 1956ರ ತನಕ ಕೊಡಗು ರಾಜ್ಯ ಸಹಕಾರ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸಿರುವ ಇತಿಹಾಸ ಇದೆ ಎಂದರು. ಅನಂತರದಲ್ಲಿ ಕೊಡಗು ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್ ಎಂದು ಪರಿಗಣಿಸಿದ್ದರು ಭೂ ದಾಖಲೆ ಲಭಿಸಿರಲಿಲ್ಲವೆಂದು ಬೊಟ್ಟು ಮಾಡಿದರು.