ವೀರಾಜಪೇಟೆ, ಫೆ. 25: ವೀರಾಜಪೇಟೆಯ ಮಗ್ಗುಲ ಗ್ರಾಮದಲ್ಲಿರುವ ಧಾನ್ಯಲಕ್ಷ್ಮಿ ಕಾಫಿ ಕ್ಯೂರಿಂಗ್ ವಕ್ರ್ಸ್ ಹಾಗೂ ಟ್ರೇಡರ್ಸ್‍ನ ಐದು ಮಂದಿ ಪಾಲುದಾರರು ಕಾಫಿ ಬೆಳೆಗಾರರಿಂದ ಕಾಫಿ ಖರೀದಿಸಿ ಸುಮಾರು 11 ಮಂದಿ ಬೆಳೆಗಾರರಿಗೆ ನಗದು ನೀಡದೆ ವಂಚಿಸಿದ ಆರೋಪದ ಮೇರೆ ವೀರಾಜಪೇಟೆ ನಗರ ಪೊಲೀಸರು ಮಗ್ಗುಲ ಗ್ರಾಮದ ವಿ.ಎಂ.ಕೆಂಪಣ್ಣ , ಪತ್ನಿ ವಿ.ಕೆ.ಚಂದ್ರಿಕಾ ಕೆಂಪಣ್ಣನ ಮಗ ವಿ.ಕೆ.ಗುರುಪ್ರಸಾದ್, ಮೈತಾಡಿ ಗ್ರಾಮದ ಐ.ರಾಯ್ ತಿಮ್ಮಯ್ಯ, ಅವರ ಪತ್ನಿ ಸವಿತಾ ತಿಮ್ಮಯ್ಯ ವಿರುದ್ಧ ಐ.ಪಿ.ಸಿ. 417, 420 ಆರ್/34 ವಿಧಿ ಪ್ರಕಾರ ಮೊಕದ್ದಮೆ ದಾಖಲಿಸಿ ಎಫ್‍ಐಆರ್‍ನ್ನು ಇಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ಈ ಐದು ಮಂದಿ ಧಾನ್ಯಲಕ್ಷ್ಮಿ ಟ್ರೇಡರ್ಸ್ ಸಂಸ್ಥೆಯ ಪರವಾಗಿ ಕಾಫಿ ಖರೀದಿಸಿದ್ದು ಕೆಲವು ಬೆಳೆಗಾರರಿಗೆ ಚೆಕ್ ನೀಡಿದರೂ ಚೆಕ್ ನಗದೀಕರಣ ಗೊಂಡಿಲ್ಲ. ಕೆಲವು ಬೆಳೆಗಾರರಿಗೆ ನಗದು ಕೊಡದೆ ಸತಾವಣೆ ನೀಡುತ್ತಿದ್ದು ನಂಬಿಕೆದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಕೊಂಗಣ ಗ್ರಾಮದ ಎನ್.ಎಸ್.ಚಿಣ್ಣಪ್ಪ ಅವರು ಇಲ್ಲಿನ ನಗರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ತನಿಖೆ ನಡೆಸಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.ಪೊಲೀಸರ ದೂರಿನ ಪ್ರಕಾರ ಈ ಸಂಸ್ಥೆಯ ಐದು ಮಂದಿ ಪಾಲುದಾರರು ಬೆಳೆಗಾರರಿಗೆ ಒಟ್ಟು ರೂ ಎಪ್ಪತ್ತೇಳು ಲಕ್ಷದ ಒಂಭತ್ತು ಸಾವಿರದ ಆರು ನೂರ ತೊಂಭತ್ತು ವಂಚಿಸಿದ್ದಾರೆ ಎಂದು ಎಫ್ ಐ ಆರ್ ನಲ್ಲಿ ನಮೂದಿಸಲಾಗಿದೆ.ಕಾಫಿ ಬೆಳೆಗಾರರಿಂದ ಡಿ.ವೈಎಸ್‍ಪಿಗೆ ದೂರುಕಳೆದ 6-2-20ರಂದು ಸುಮಾರು 23ಮಂದಿ ಬೆಳೆಗಾರರು ಸಹಿ ಮಾಡಿದ ಕಾಫಿ ಖರೀದಿ ಮಾಡಿ ನಗದು ಪಾವತಿಸದೇ ಇರುವ ವಂಚನೆಯ ದೂರನ್ನು ಇಲ್ಲಿನ ಡಿ.ವೈಎಸ್.ಪಿ ಜಯಕುಮಾರ್ ಅವರಿಗೆ ನೀಡಿದ್ದರು. ದೂರಿನಲ್ಲಿ ನಮೂದಿಸಿ ರುವಂತೆÀ ಪ್ರಕರಣದಲ್ಲಿನ ಮೊದಲ ಆರೋಪಿ ವಿ.ಎಂ.ಕೆಂಪಣ್ಣ ಈಗ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದಾರೆ.