ಕುಶಾಲನಗರ, ಫೆ. 25: ಸೋಮವಾರಪೇಟೆ ತಾಲೂಕು ಕುಲಾಲ ಗುಂಡ ಕುಂಬಾರ ಸಂಘದ ವತಿಯಿಂದ ಸರ್ವಜ್ಞ ಜಯಂತೋತ್ಸವ ಆಚರಿಸಲಾಯಿತು.

ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲಿರುವ ಕಚೇರಿಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷೆ ಕೆ.ಎಸ್. ಮುತ್ತಮ್ಮ ಕೋಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಲಾಲ ಗುಂಡ ಕುಂಬಾರರ ಸಂಘದ ತಾಲೂಕು ಉಪಾಧ್ಯಕ್ಷ ರಾಮಚಂದ್ರ, ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ಕೃಷ್ಣಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ್, ಸಹಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಸುರೇಶ್, ತಾಲೂಕು ಸಂಚಾಲಕ ಧರ್ಮಪ್ಪ, ಸದಸ್ಯರಾದ ಆನಂದ್, ಮಂಜುನಾಥ್ ಇದ್ದರು.