ವೀರಾಜಪೇಟೆ, ಫೆ. 25: ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ, ಪೆಗ್ಗರಿಕಾಡು ಕಾಲೋನಿಯ ನವೋದಯ ಯುವಕ ಸಂಘದ ವತಿಯಿಂದ ಮಹಾ ಶಿವರಾತ್ರಿಯ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಕಾರ್ಯಕ್ರಮದ ಸಮರೋಪ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ಅಗಮಿಸಿದ ಮಂಗಳೂರು ಪ್ರಾಂತ ದುರ್ಗವಾಹಿನಿ ಸಂಯೋಜಕಿ ವಿಧ್ಯ ಮಲ್ಯ ಮಾತನಾಡಿದರು.

ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಗ್ರಾಮೀಣಾ ಕ್ರೀಡಾಕೂಟವನ್ನು ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಜೆ. ಜವರೇಗೌಡ ಉದ್ಘಾಟಿಸಿದರು.

ಅಂತಿಮ ಪಂದ್ಯಾಟ ಡ್ಯೂಡ್ಸ್ ತಂಡ ಮತ್ತು ಸಿದ್ದಾಪುರ ಫ್ರೆಂಡ್ಸ್ ತಂಡಗಳ ಮಧ್ಯೆ ಪಂದ್ಯ ನಡೆದು ಡ್ಯೂಡ್ಸ್ ತಂಡ ಜಯಗಳಿಸಿತು.

ನವೋದಯ ಯುವಕ ಸಂಘದ ಅಧ್ಯಕ್ಷ ಟಿ.ಎ. ಪ್ರದೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಚ್ಚಿಮಂಡ ಸಾಬಾ ಬೆಳ್ಳಿಯಪ್ಪ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್, ಶ್ರೀ ವಿನಾಯಕ ಗ್ರೂಪ್ ಮಾಲೀಕ ಬಿ.ವಿ. ಹೇಮಂತ್, ಕಾವೇರಿ ಶಾಲೆಯ ಅಧ್ಯಕ್ಷ ಸುದೇಶ್ ಬಿ.ಎಸ್., ಗುತ್ತಿಗೆದಾರ ಹರೀಶ್ ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಬಿ.ಎ. ಗಣೇಶ್, ನವೋದಯ ಯುವಕ ಸಂಘ ಕೆ.ಎಂ. ಸುಧೀಶ್ ಇತರರಿದ್ದರು.