ಶನಿವಾರಸಂತೆ, ಫೆ. 25: ಕೊಡ್ಲಿಪೇಟೆಯ ವಿಎಸ್‍ಎಸ್‍ಎನ್ ಬ್ಯಾಂಕ್‍ನಲ್ಲಿ ತಾ. 23 ರಂದು ಬ್ಯಾಂಕಿನ ಅಧ್ಯಕ್ಷ ಎಸ್.ಡಿ. ತಮ್ಮಯ್ಯ ಅವರೊಂದಿಗೆ ಬ್ಯಾಂಕಿನ ಸದಸ್ಯ ತೇಜಕುಮಾರ್ ಮಾತನಾಡಿ ಹಾಗೂ ಕಳೆದ ಸಭೆಯ ವಿಷಯದ ಬಗ್ಗೆ ಚರ್ಚೆ ಮಾಡುತ್ತಾ, ಉದ್ರೇಕಗೊಂಡು ಅಧ್ಯಕ್ಷರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಲ್ಲೆ ಇದ್ದ ಚೇರ್‍ನಿಂದ ಅಧ್ಯಕ್ಷರ ಮೇಲೆ ಹಲ್ಲೆಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ತಕ್ಷಣ ಅಧ್ಯಕ್ಷ ಡಿ. ತಮ್ಮಯ್ಯ ಅವರು ಸದಸ್ಯ ತೇಜಕುಮಾರ್ ಮೇಲೆ ಮರು ಹಲ್ಲೆ ಮಾಡಿದ್ದಾರೆ. ಅಲ್ಲದೆ ಚೂರಿಯಿಂದ ಚುಚ್ಚಲು ಬಂದಾಗ ಎಡತೋಳಿಗೆ ಚಾಕು ಗೀರಿ ಗಾಯವಾಗಿದೆ, ಗಾಯಾಳು ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈರ್ವರು ಆರೋಪಿಗಳು ಶನಿವಾರಸಂತೆ ಪೊಲೀಸ್ ಠಾಣೆಗೆ ಹಾಜರಾಗಿ ಪ್ರತ್ಯೇಕ ದೂರುಗಳನ್ನು ನೀಡಿರುತ್ತಾರೆ. ಠಾಣಾಧಿಕಾರಿ ಕೃಷ್ಣನಾಯಕ್ ಈರ್ವರು ಆರೋಪಿಗಳ ಮೇಲೆ ವಿಧಿ 323,324,506 ಐಪಿಸಿ ಹಾಗೂ ವಿಧಿ 324,504,506ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿರುತ್ತಾರೆ.