*ಗೋಣಿಕೊಪ್ಪಲು, ಫೆ. 25: ಬಲ್ಯಮಂಡೂರು ಗ್ರಾ.ಪಂ. ವ್ಯಾಪ್ತಿಯ ಸುಮಾರು 11ಕ್ಕೂ ಹೆಚ್ಚು ರಸ್ತೆ ಕಾಮಗಾರಿಗಳು 1 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿ ದ್ದವು. 15 ಲಕ್ಷದಲ್ಲಿ ಚಿಕ್ಕಮಂಡೂರು, ಕೋಣಗೇರಿ ರಸ್ತೆ, 8 ಲಕ್ಷದಲ್ಲಿ ಬರಂದೋಡು, ಕೂತಮಾಡು ಲಿಂಕ್ ರಸ್ತೆ, 5 ಲಕ್ಷದಲ್ಲಿ ಬಲ್ಯಮಂಡೂರು ಬಿ.ಬಿ.ಹೆಚ್ ರಸ್ತೆ, 5 ಲಕ್ಷದಲ್ಲಿ ನಡಿಕೇರಿ, ಮುಗುಟಗೇರಿ ಗುದ್ದೋಡ್‍ಮಂದ್ ರಸ್ತೆ, 4 ಲಕ್ಷದಲ್ಲಿ ಐನಂಡ ಕುಟುಂಬಸ್ಥರ ರಸ್ತೆ, 5 ಲಕ್ಷದಲ್ಲಿ ಚಿಕ್ಕನನಾಡು ಸಂಪರ್ಕ ರಸ್ತೆ, 10 ಲಕ್ಷದಲ್ಲಿ ನಡಿಕೇರಿ ಗ್ರಾಮದ ಅಂಬಲ ಸಂಪರ್ಕ ರಸ್ತೆ, 5 ಲಕ್ಷದಲ್ಲಿ ಮುಗುಟಗೇರಿ ಭಗವತಿ ದೇವಸ್ಥಾನ ದಲ್ಲಿ ಕಳ್ಳಿಚಂಡ ಕುಟುಂಬಸ್ಥರ ರಸ್ತೆ, 4 ಲಕ್ಷದಲ್ಲಿ ತೂಚಮಕೇರಿ ಬೇರುಕೊಲ್ಲಿ ಸಂಪರ್ಕ ರಸ್ತೆ, 32 ಲಕ್ಷದಲ್ಲಿ ಕುಡಚ್ಚಿ ಪ.ಜಾತಿಯ ಕಾಲೋನಿ ರಸ್ತೆ, 10 ಲಕ್ಷದಲ್ಲಿ ರಾಮ ಕಾಲೋನಿ ರಸ್ತೆ ಅಬಿವೃದ್ಧಿ ಸೇರಿದಂತೆ ಒಂದು ಕೋಟಿ ಮೂರು ಲಕ್ಷದ ಅನುದಾನದಲ್ಲಿ ನಡೆದ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ರಸ್ತೆಗಳು ಗುಣಮಟ್ಟದಿಂದ ಕೂಡಿರಲು ಗ್ರಾಮಸ್ಥರು ಈ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಒಳಿತು. ಯಾವುದೇ ಬಿನ್ನಾಭಿಪ್ರಾಯಗಳಿಲ್ಲದೆ ರಸ್ತೆಯ ಅಗಲೀಕರಣಕ್ಕೆ ತೋಟದ ಮಾಲೀಕರು ಮುಂದಾಗಬೇಕು ಎಂದು ಈ ಸಂದರ್ಭ ಸಲಹೆ ನೀಡಿದರು. ಮಾರ್ಚ್ ಅಂತ್ಯದೊಳಗೆ ಬಿಡುಗಡೆ ಯಾದ ಅನುದಾನದ ಕಾಮಗಾರಿ ಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರು ಹಾಗೂ ಇಂಜಿನಿಯರು ಗಳು ಮುಂದಾಗಬೇಕು ಎಂದರು.

ರಸ್ತೆ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಗೆ ಸರ್ಕಾರ ಹೆಚ್ಚಿನ ಅನುದಾನವನ್ನು ನೀಡುತ್ತಿದೆ. ಅಭಿವೃದ್ಧಿಯ ದಿಟ್ಟ ನೋಟದತ್ತ ಬಿಜೆಪಿ ಸರ್ಕಾರ ಮುಂದಾಗಿದೆ. ಇಂಜಿನಿಯರುಗಳು ಈ ಬಗ್ಗೆ ಕಾಳಜಿ ವಹಿಸಿದರೆ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಗ್ರಾ.ಪಂ. ಅಧ್ಯಕ್ಷ ಖುಷಿ, ವಿ.ಎಸ್.ಎಸ್.ಎನ್. ಉಪಾಧ್ಯಕ್ಷ ಭರತ್, ಸದಸ್ಯ ಚಂದ್ರು, ಸ್ಥಾನೀಯ ಸಮಿತಿ ಅಧ್ಯಕ್ಷ ಮಂದಣ್ಣ, ಅಕ್ರಮ ಸಕ್ರಮ ಸಮಿತಿ ಸದಸ್ಯ ಲಾಲ ಭೀಮಯ್ಯ, ಪೆÇನ್ನಂಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು, ನಿಕಟಪೂರ್ವ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಆರ್.ಎಂ.ಸಿ. ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ, ಗ್ರಾ.ಪಂ. ಸದಸ್ಯ ಕೊಟ್ಟಂಗಡ ಪ್ರಕಾಶ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧು ಹಾಜರಿದ್ದರು.