ಕೂಡಿಗೆ, ಫೆ. 25 : ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶವಾದ ಕೂಡ್ಲೂರು ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆ, ಕೈಗಾರಿಕಾ ಪ್ರದೇಶದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿ ರೂ. 9.50 ಕೋಟಿ ಮಂಜೂ ರಾಗಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕರು, ಕಳೆದ ಹತ್ತು ವರ್ಷಗಳಿಂದ ಈ ರಸ್ತೆ ಕಾಮಗಾರಿ ನಡೆಸುವ ಬಗ್ಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ವಿಷಯವಾಗಿ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಲಾಗಿತ್ತು. ಅದರ ಪ್ರಯತ್ನವಾಗಿ ಕೈಗಾರಿಕಾ ಪ್ರದೇಶ ಮಂಡಳಿಯ ವತಿಯಿಂದ ಇಂದು ಕಾಮಗಾರಿ ನಡೆಸಲು ಸರ್ಕಾರ ಹಣ ಮಂಜೂರು ಮಾಡಿದೆ ಎಂದರು.

ಈ ಸಂದರ್ಭ ಕೂಡ್ಲೂರು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪ್ರವೀಣ್, ಎಸ್‍ಎಲ್‍ಎನ್ ವ್ಯವಸ್ಥಾಪಕ ಸಾತಪ್ಪನ್ ಮತ್ತು ವಿಶ್ವನಾಥನ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್. ಮಂಜುಳಾ, ತಾಲೂಕು ಪಂಚಾಯ್ತಿ ಸದಸ್ಯ ಗಣೇಶ್, ಕೈಗಾರಿಕಾ ಪ್ರದೇಶದ ಇಂಜಿನಿಯರ್ ಮಂಜುನಾಥ್, ಗುತ್ತಿಗೆದಾರ ವೆಂಕಟರೆಡ್ಡಿ ಸೇರಿದಂತೆ ಕೈಗಾರಿಕಾ ಕ್ಷೇತ್ರದ ವಿವಿಧ ಘಟಕಗಳ ವ್ಯವಸ್ಥಾಪಕರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳ ಸಂಘದ ಕಾರ್ಯದರ್ಶಿ ಕೆ.ವರದ ಮತ್ತಿತರರು ಇದ್ದರು.