ಮಡಿಕೇರಿ, ಫೆ. 25: ಅರೆಭಾಷೆ ಸಮುದಾಯದ ಸಹೋದರರು ನೆರೆಯ ಸುಳ್ಯ ಪಟ್ಟಣದಲ್ಲಿ ಅರ್ಹವಾದ ಸಾಂಸ್ಕೃತಿಕ ಕೇಂದ್ರವನ್ನು ಪಡೆಯುತ್ತಿದ್ದಾರೆ. ಇದು ಅರೆಭಾಷೆ ಸಂಸ್ಕೃತಿ ಮೇಳೈಸುವ ತಕ್ಕುದಾದ ಪ್ರದೇಶದಲ್ಲಿದೆ ಎಂಬುದು ಕೊಡವ ಬುಡಕಟ್ಟು ಜನಾಂಗದವರಿಗೆ ಸ್ವಾಗತಾರ್ಹ ಸಂಕೇತವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್‍ನ ಅಧ್ಯಕ್ಷ ಎನ್.ಯು. ನಾಚಪ್ಪ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರತಿನಿಧಿಗಳು ಕೂಡ ತಮ್ಮ ಸಂಸ್ಕೃತಿಗಾಗಿ ಕೇಂದ್ರ ಸಚಿವ ಸದಾನಂದ ಗೌಡರ ದೃಷ್ಟಿಕೋನದಿಂದ ಪ್ರಯತ್ನಿಸಬೇಕಿದೆ. ಕೊಡವರು ಸಹ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಕೇಂದ್ರವನ್ನು ಪಡೆಯಬೇಕಿದೆ. ಇದು ಭಾರತದ ಶ್ರೀಮಂತ ವೈವಿಧ್ಯಮಯ ಸಂಸ್ಕೃತಿಯನ್ನು ನಿರ್ಮಿಸುತ್ತದೆ ಮತ್ತು ಸಂರಕ್ಷಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.