*ಗೋಣಿಕೊಪ್ಪಲು, ಫೆ. 25: ಕೊಡಗು ಜಿಲ್ಲಾ ಜಾಂಬವ ಯುವ ಸೇನಾ ವತಿಯಿಂದ ಶಿವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮೊದಲ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಪೆÇನ್ನಂಪೇಟೆ ಸರ್ಕಾರಿ ಕಾಲೇಜು ಮೈದಾನದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ಮೂರು ದಿನಗಳ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಆಕರ್ಷಣೆಯಾಗಿ ಪೆÇನ್ನಂಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಮುಖ್ಯ ಬೀದಿಯ ಮೂಲಕ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು.
ಯುವಕರನ್ನು ಒಂದುಗೂಡಿಸಿ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಜಾಂಬವ ಯುವ ಸೇನೆ ಕ್ರಿಕೆಟ್ ಪಂದ್ಯಾಟವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಬೋಪಯ್ಯ ಹೇಳಿದರು.
ಜಾಂಬವ ಯುವ ಸೇನೆಯ ರಾಜ್ಯಾಧ್ಯಕ್ಷ ಡಾ. ರಮೇಶ್ ಚಕ್ರವರ್ತಿ ಇತರ ಜಿಲ್ಲೆಯ ಜಾಂಬವ ಯುವ ಸೇನೆಯ ಚಟುವಟಿಕೆಯನ್ನು ಪರಿಗಣಿಸಿದರೆ ಕೊಡಗು ಜಿಲ್ಲೆಯ ಘಟಕ ಕ್ರಿಯಾಶೀಲವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ ಮಾತನಾಡಿ, ಸಂಘಟನೆಗಳು ಈ ರೀತಿಯ ಕ್ರೀಡಾ ಉತ್ಸವವನ್ನು ನಡೆಸುವುದರಿಂದ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಾಧ್ಯವಿದೆ ಎಂದರು.
ಉದ್ಯಮಿ ಗುಮ್ಮಟ್ಟೀರ ಕಿಲನ್ಗಣಪತಿ ಮಾತನಾಡಿ, ಉತ್ತಮ ಸಂಘಟನೆಗಳು ನಡೆಸುವ ಪಂದ್ಯಾಟಗಳಿಗೆ ದಾನಿಗಳ ಅಳಿಲು ಸೇವೆ ಲಭ್ಯವಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಾಂಭವ ಯುವ ಸೇನೆ ಜಿಲ್ಲಾಧ್ಯಕ್ಷ ಸತೀಶ್ ಸಿಂಗಿ ಅಧಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪೆÇನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರಾ, ಸದಸ್ಯ ಅಮ್ಮತ್ತೀರ ಸುರೇಶ್, ಪೆÇನ್ನಂಪೇಟೆ ಎ.ಪಿ.ಎಂ.ಸಿ. ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ಮಾಹಿ ಸೈನಿಕ ರಮೇಶ್, ತಿತಿಮತಿ ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯಿನಿ ಪಾರ್ವತಿ, ಪೆÇನ್ನಂಪೇಟೆ ಬಿಜೆಪಿ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸಿರಾಜ್ ಬೇಗ್, ಜಾಂಬವ ಯುವ ಸೇನೆ ತಾಲೂಕು ಅಧ್ಯಕ್ಷ ಹೆಚ್.ಎನ್. ರವಿ, ಉಪಾಧ್ಯಕ್ಷ ಎಸ್. ಶ್ರೀನಿವಾಸ್, ಜಿಲ್ಲಾಧ್ಯಕ್ಷ ಉಪಾಧ್ಯಕ್ಷ ಸಂತೋಷ್ ಹೆಚ್.ಕೆ, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಹೇಶ್, ಗೌರವಾಧ್ಯಕ್ಷ ಹೆಚ್.ವಿ. ಗಣೇಶ್, ಕ್ರೀಡಾ ಸಲಹೆಗಾರ ಹೆಚ್.ಎನ್. ಅರುಣ ಉಪಸ್ಥಿತರಿದ್ದರು. ಸಾವಿತ್ರಿಭಾಯಿ ಫುಲೆ ಪಾರಿತೋಷಕ ಪಡೆದ ಶಿಕ್ಷಕಿ ಪಾರ್ವತಿ ಯವರನ್ನು ಶಾಸಕರ ಸಮ್ಮುಖದಲ್ಲಿ ಸನ್ಮಾನಿಸ ಲಾಯಿತು. ಮೂರು ದಿನಗಳು ನಡೆಯುವ ಪಂದ್ಯಾಟದಲ್ಲಿ 12 ತಂಡಗಳು ಭಾಗವಹಿಸಿವೆ.