ಕುಶಾಲನಗರ, ಫೆ. 25: ಕುಶಾಲನಗರ ಮುಳ್ಳುಸೋಗೆ ಗ್ರಾಮದ ಜನತಾ ಕಾಲನಿಯಲ್ಲಿರುವ ಶ್ರೀ ಗೌರಿಗಣೇಶ ದೇವಾಲಯದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ ನವಗ್ರಹ, ಗಣಪತಿ, ದುರ್ಗಾಪೂಜೆ ನಡೆಯಿತು. ಈ ಸಂದರ್ಭ ಕುಶಾಲನಗರ ದೇವಾಲಯ ಒಕ್ಕೂಟದ ಪ್ರತಿನಿಧಿಗಳು ಆಗಮಿಸಿ ಫಲತಾಂಬೂಲ ಅರ್ಪಿಸುವು ದರೊಂದಿಗೆ ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡರು.

ದೇವಾಲಯ ಸೇವಾ ಟ್ರಸ್ಟ್‍ನ ಅಧ್ಯಕ್ಷ ಸುಚಿತ್ರಾ, ಉಪಾಧ್ಯಕ್ಷ ಜ್ಯೋತಿ, ಕಾರ್ಯದರ್ಶಿ ರಾಧಾ, ಚಂದ್ರಿಕಾ, ವಿಜಿ, ಶ್ರೀಧರ್ ಇದ್ದರು. ಪೂಜಾ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್, ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಖಜಾಂಚಿ ಶ್ರೀನಿವಾಸರಾವ್ ಮತ್ತು ಕುಶಾಲನಗರದ ವಿವಿಧ ದೇವಾಲಯಗಳ ಪ್ರತಿನಿಧಿಗಳು ಇದ್ದರು.