ಮಡಿಕೇರಿ, ಫೆ. 24: ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ರೈತರ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಸರಕಾರ ಅರಣ್ಯ ಇಲಾಖೆಗೆ ಅನುಮತಿ ನೀಡಿದೆ. ಆ ಮೇರೆಗೆ ತಾ. 25 ರಿಂದ (ಇಂದಿನಿಂದ) ಕಾರ್ಯಾಚರಣೆಗೆ ತಯಾರಿ ನಡೆಸಲಾಗಿದೆ.

ವೀರಾಜಪೇಟೆ ಉಪವಿಭಾಗದ ಅರಣ್ಯ ಅಧಿಕಾರಿ ಶಿವಶಂಕರ್ ಹಾಗೂ ವೈದ್ಯರಾದ ಡಾ. ಮುಜುಂ ರೆಹಮಾನ್ ಮಾರ್ಗದರ್ಶನದಲ್ಲಿ ತಾ. 25 ರಂದು (ಇಂದು) ಹುಲಿಯ ಚಲನವಲನ ಕುರಿತು ಖುದ್ದು ಪರಿಶೀಲನೆಯೊಂದಿಗೆ, ವ್ಯಾಘ್ರ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ.

ಈ ದಿಸೆಯಲ್ಲಿ ಇಂದು ಅರಣ್ಯಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಪೂರ್ವ ತಯಾರಿ ಕುರಿತು ಸಭೆ ನಡೆಯಿತು.