ಪೊನ್ನಂಪೇಟೆ, ಫೆ. 24 : ಮೂರ್ನಾಡು ಪ್ರದೇಶದಲ್ಲಿ ವೈದ್ಯರಾಗಿರುವ ಡಾ. ಜೆ.ಎ. ಕುಂಜ್ಞಬ್ದುಲ್ಲಾ ಅವರ ಆರೋಗ್ಯ ಕೇಂದ್ರದಲ್ಲಿ ಕಳೆದ ಶನಿವಾರದಂದು ವ್ಯಕ್ತಿಯೊಬ್ಬ ದಾಂಧಲೆ ನಡೆಸಿ ಅವರ ಮೇಲೆ ಅನಗತ್ಯ ವಿಚಾರವಾಗಿ ಹಲ್ಲೆಗೆ ಪ್ರಯತ್ನಿಸಿದ್ದಾನೆ. ಇದನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ತೀವ್ರವಾಗಿ ಖಂಡಿಸಲಾಗುವುದು ಎಂದು ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.