ಸುಂಟಿಕೊಪ್ಪ, ಫೆ. 24: ಮರ ಬಿದ್ದು ಕಾರ್ಮಿಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಸುಂಟಿಕೊಪ್ಪ ಸಮೀಪದ ನಾಕೂರು ಗ್ರಾಮದ ಉಮೇಶ್ ಎಂಬವರು ಈರಳೆವಳಮುಡಿ ಗ್ರಾಮದ ಅಬ್ಯಾಲ ತೋಟದಲ್ಲಿ ಇಂದು ಬೆಳಿಗ್ಗೆ ಸಹ ಕಾರ್ಮಿಕರೊಂದಿಗೆ ಮರವೊಂದನ್ನು ಕಡಿಯುವ ಕೆಲಸದಲ್ಲಿ ತೊಡಗಿದ್ದರು. ಕೆಲಸದ ನಡುವೆ ಮರಕ್ಕೆ ಕಟ್ಟಲಾಗಿದ್ದ ಹಗ್ಗವನ್ನು ಹಿಡಿದು ಎಳೆಯುತ್ತಿದ್ದಾಗ ಆಯತಪ್ಪಿ ಬಿದ್ದಿದ್ದು, ದುರದೃಷ್ಟವಶಾತ್ ಅವರ ಮೇಲೆಯೇ ಮರ ಬಿದ್ದಿದೆ. ಉಮೇಶ್ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ನಂತರ ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಿತು.