ಕೈಕಾಡು ಗ್ರಾಮದ ಮಕ್ಕೋಟು ಶ್ರೀ ಮಹಾಲಕ್ಷ್ಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು, ದೇವರ ಪ್ರತಿಷ್ಠಾಪನೆ ಮಾ. 4 ಮತ್ತು 5 ರಂದು ನಡೆಯಲಿದೆ. ಊರಿನವರ ಹಾಗೂ ಕೊಡುಗೈ ದಾನಿಗಳ ಸಹಕಾರದೊಂದಿಗೆ ದೇವಾಲಯ ನವೀಕರಣಗೊಂಡಿದೆ. ಮಾ. 4 ರಂದು ಸಂಜೆ 7-30ಕ್ಕೆ ವಾಸ್ತು ರಕ್ಷೋತ್ತರ ಹೋಮ ನಡೆಯಲಿದ್ದು, ತಾ. 5 ರಂದು ಬೆ. 8 ಗಂಟೆಗೆ ಅಷ್ಟದಿಕ್ಪಾಲಕರ ಸತ್ವಮಾಂತ್ರಿಕ ಹೋಮ ನಡೆಯಲಿದೆ. ಅದೇ ದಿನ 11 ಗಂಟೆಗೆ ಪ್ರತಿಷ್ಠಾಪನೆ- ಮಹಾಪೂಜೆ ನೆರವೇರಲಿದ್ದು, ತಂತ್ರಿಗಳಾದ ಶ್ರೀ ಪೃಥ್ವಿಭಟ್ ಸಾನಿಧ್ಯ ವಹಿಸಲಿದ್ದಾರೆ. ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಸರ್ಕಾರದಿಂದ ಧನಸಹಾಯ ಪಡೆಯುವಲ್ಲಿ ಸಹಕರಿಸಿದ ಕದ್ದಣಿಯಂಡ ಹರೀಶ್ ಬೋಪಣ್ಣ, ದೇವಾಲಯದ ಒಳಾಂಗಣಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾನೈಟ್ ಹಾಕಿಸಿದ ಗುತ್ತಿಗೆದಾರ ಸುರೇಶ್ ಮುತ್ತಪ್ಪ ಇವರುಗಳನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುವದು ಎಂದು ಮುಕ್ಕೋಟು ಶ್ರೀಮಹಾಲಕ್ಷ್ಮಿ ಭಕ್ತಜನ ಫಂಡ್‍ನ ಪ್ರಕಟಣೆ ತಿಳಿಸಿದೆ. ದೇವಾಲಯದ ಅಭಿವೃದ್ಧಿಗೆ ಧನಸಹಾಯ ನೀಡ ಬಯಸುವ ದಾನಿಗಳು ಪಾರಾಣೆ ಕಾರ್ಪೋರೇಶನ್ ಬ್ಯಾಂಕ್ ಂ/ಛಿ ಟಿo. 520101251251878 (Iಈsಛಿ:ಛಿoಡಿಠಿoooo355) ಈ ಖಾತೆಗೆ ಜಮಾ ಮಾಡುವಂತೆ ಆಡಳಿತ ಮಂಡಳಿ ಕೋರಿದೆ.