ಮಡಿಕೇರಿ, ಫೆ. 24: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 25ರಂದು (ಇಂದು) ಭಗವಾನ್ ಶ್ರೀ ರಾಮಕೃಷ್ಣರ 185ನೇ ಜನ್ಮ ದಿನೋತ್ಸವ ಆಚರಿಸಲಾಗುತ್ತಿದೆ. ಮುಂಜಾನೆ 5.30ಕ್ಕೆ ಮಂಗಳಾರತಿ, ಉಷಾ ಕೀರ್ತನೆಯೊಂದಿಗೆ ಆರಂಭಗೊಂಡು, ಪೂಜೆ, ಹೋಮ, ಭಜನೆಯೊಂದಿಗೆ ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ ಆಧಾರಿತ ಕಗ್ಗಮ್ಮಾಜಿ ಕಾರ್ಯಕ್ರಮ ನಡೆಯಲಿದೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪನಂದಾಜೀ ತಿಳಿಸಿದ್ದಾರೆ.