ಮಡಿಕೇರಿ, ಫೆ. 24: ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘ ಹಾಗೂ ವ್ಯವಸ್ಥಾಪನಾ ಸಮಿತಿಯ ಕಚೇರಿ ಉದ್ಘಾಟನೆಗೊಂಡಿತು. ಗಣಪತಿ ಹೋಮ ನೆರವೇರಿಸುವುದರೊಂದಿಗೆ ಕಚೇರಿ ಉದ್ಘಾಟಿಸಲಾಯಿತು. ಕಚೇರಿಯನ್ನು ದಾನಿಗಳ ಸಹಕಾರದೊಂದಿಗೆ ಭಕ್ತಜನ ಸಂಘದ ವತಿಯಿಂದ ನಿರ್ಮಿಸಲಾಗಿದೆ. ಸಂಘ ಹಾಗೂ ಸಮಿತಿಯ ಸದಸ್ಯರುಗಳು ಈ ಸಂದರ್ಭ ಹಾಜರಿದ್ದರು.