ಸೋಮವಾರಪೇಟೆ, ಫೆ. 24: ಭಾರತದ ಶತ್ರು ದೇಶ ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರಿಗೆ ಕಂಡಲ್ಲಿ ಗುಂಡು ಹಾಕುವ ಕೆಲಸ ಮಾಡಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ.ನಮ್ಮ ದೇಶದಲ್ಲಿದ್ದುಕೊಂಡು ಇಲ್ಲಿನ ಅನ್ನ, ನೀರು ಸೇವಿಸಿ, ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗುವವರಿಗೆ ಕಂಡಲ್ಲಿ ಗುಂಡು ಹಾಕುವ ಕೆಲಸ ಮಾಡಬೇಕು. ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದರೆ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡುವ ಕೆಲಸ ಆಗಬೇಕು ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿ ಸಭೆಯಲ್ಲಿ ಅಮೂಲ್ಯ ಎಂಬಾಕೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ. ಇಲ್ಲಿ ವಾಸವಿದ್ದು, ಸೌಕರ್ಯ ಅನುಭವಿಸಿ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗುವವರನ್ನು ಕಂಡಲ್ಲಿ ಗುಂಡಿಡಬೇಕು ಎಂದರು.

ಇಂತಹ ದೇಶದ್ರೋಹಿ ಘೋಷಣೆ ಕೂಗುವವರ ಬಗ್ಗೆ ಯಾರೂ ಸಹ ಮೃದು ಧೋರಣೆ ತಾಳಬಾರದು. ಇಂತಹವರ ಪರ ವಕೀಲರೂ ಸಹ ವಕಾಲತ್ತು ವಹಿಸಬಾರದು ಎಂದು ರಂಜನ್ ತಮ್ಮ ನಿಲುವು ಸ್ಪಷ್ಟಪಡಿಸಿದರು.